IPL ಪ್ರಸಾರ ಹಕ್ಕು ಮಾರಾಟ: ಟಿವಿ ಬಿಡ್ ಗೆದ್ದ ಸೋನಿ, ವಯಾಕಾಮ್ 18 ಪಾಲಿಗೆ ಡಿಜಿಟಲ್ ಪ್ರಸಾರದ ಹಕ್ಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಐಪಿಎಲ್ ಮಾಧ್ಯಮ ಹಕ್ಕುಗಳ ಇ-ಹರಾಜಿನಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹೋರಾಡಿದ ನಂತರ, ವಯಾಕಾಮ್ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡರೆ, ಸೋನಿ ಟಿವಿ ಪ್ರಸಾರದ ಹಕ್ಕುಗಳನ್ನು ಗೆದ್ದಿದೆ.

2023ರಿಂದ 2027ರ ವರೆಗಿನ 5 ವರ್ಷಗಳ ವರೆಗೆ ಐಪಿಎಲ್ ಪಂದ್ಯಗಳ ಪ್ರಸಾರ ಮಾಡುವ ಹಕ್ಕನ್ನು ಬಿಸಿಸಿಐ ಹರಾಜಿನ ಮೂಲಕ ಮಾರಾಟ ಮಾಡಿದೆ. ವಿಶೇಷ ಅಂದರೆ ಟಿವಿ ಹಾಗೂ ಡಿಜಿಟಲ್ ಹಕ್ಕು ಒಟ್ಟು 44,075 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಟಿವಿ ಹಕ್ಕನ್ನು ಸೋನಿ ಖರೀದಿಸಿದರೆ, ಡಿಜಿಟಲ್ ಹಕ್ಕನ್ನು ರಿಲಯನ್ಸ್ ಜಿಯೋ ಖರೀದಿಸಿದೆ ಎಂದು ವರದಿಯಾಗಿದೆ.

ಮುಂದಿನ 5 ವರ್ಷಗಳಲ್ಲಿ ಒಟ್ಟು 410 ಐಪಿಎಲ್ ಪಂದ್ಯಗಳು ನಡೆಯಲಿದೆ. ಒಟ್ಟು ಮೊತ್ತ ಲೆಕ್ಕಹಾಕಿದರೆ ಐಪಿಎಲ್ ಪ್ರಸಾರ ಹಕ್ಕು ಪಡೆದ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ ಬಿಸಿಸಿಐಗೆ 107.5 ಕೋಟಿ ರೂಪಾಯಿ ನೀಡಬೇಕು. ಸೋನಿ ಸಂಸ್ಥೆ ಟಿವಿಯಲ್ಲಿ ಐಪಿಎಲ್ ಪಂದ್ಯ ಪ್ರಸಾರ ಮಾಡಲು ಪ್ರತಿ ಪಂದ್ಯಕ್ಕೆ 57.5 ಕೋಟಿ ರೂಪಾಯಿ ಬಿಸಿಸಿಐಗೆ ನೀಡಬೇಕು. ಇನ್ನು ಡಿಜಿಟಲ್ ಹಕ್ಕು ಖರೀದಿಸಿದ ರಿಲಯನ್ಸ್ ಜಿಯೋ ಪ್ರತಿ ಪಂದ್ಯಕ್ಕೆ 48 ಕೋಟಿ ರೂಪಾಯಿ ನೀಡಬೇಕು.

ವಯಾಕಾಮ್ 18, ಡಿಸ್ನಿ ಸ್ಟಾರ್, ಸೋನಿ, ಝಿ ಸೇರಿದಂತೆ ಕೆಲ ಸಂಸ್ಥೆಗಳು ಐಪಿಎಲ್ ಮಾಧ್ಯಮ ಹಕ್ಕು ಹರಾಜಿನಲ್ಲಿ ಪಾಲ್ಗೊಂಡಿತ್ತು. 2023-2027ರ ಅವಧಿಗೆ ಐಪಿಎಲ್‌ ಮಾಧ್ಯಮ ಪ್ರಸಾರ ಹಕ್ಕು ಹರಾಜಿನ ಮೊದಲ ದಿನವೇ ಪ್ರತಿ ಪಂದ್ಯದ ಮೌಲ್ಯ 100 ಕೋಟಿ ರು. ದಾಟಿತ್ತು. ಅಂತಿಮವಾಗಿ 107.5 ಕೋಟಿಗೆ ಅಂತಿಮವಾಗಿದೆ.

ಈ ಬಾರಿ ಬಿಸಿಸಿಐ ನಾಲ್ಕು ವಿಭಾಗಗಳಲ್ಲಿ ಹರಾಜು ನಡೆಸಲಿದೆ. ಈ ಪೈಕಿ ಭಾನುವಾರ ನಡೆದ ಟೀವಿ ಹಕ್ಕು ಮತ್ತು ಡಿಜಿಟಲ್‌ ಹಕ್ಕು ಮೌಲ್ಯ ಒಟ್ಟು 42,000 ಕೋಟಿ ರು.ಗೆ ವರೆಗೂ ಮೌಲ್ಯ ಏರಿಕೆಯಾಗಿತ್ತು. ಈ ಎರಡೂ ವಿಭಾಗದ ಹಕ್ಕುಗಳ ಹರಾಜು ಸೋಮವಾರವೂ ನಡೆಯಿತು.

2018-2022ರ ಅವಧಿಗೆ 16,348 ಕೋಟಿ ರು.ಗೆ ಪ್ರಸಾರ ಹಕ್ಕು ಖರೀದಿಸಿದ್ದ ಸ್ಟಾರ್‌ ಇಂಡಿಯಾ, ಪ್ರತಿ ಪಂದ್ಯದ ಪ್ರಸಾರಕ್ಕೆ 54.5 ಕೋಟಿ ರು. ಪಾವತಿಸಿತ್ತು. ಈ ಬಾರಿ 5 ವರ್ಷಗಳ ಅವಧಿಗೆ(ಒಟ್ಟು 370 ಪಂದ್ಯಗಳು) ಬಿಸಿಸಿಐ 32,890 ಕೋಟಿ ರು. ಮೂಲಬೆಲೆ ನಿಗದಿ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!