ಹೊಸದಿಗಂತ ವರದಿ ಹುಬ್ಬಳ್ಳಿ:
ದೇಶದಲ್ಲಿ ಪ್ರಧಾನಿ ಮೋದಿ ಅವರ ಅಲೆಯಿದ್ದು, ಈ ಹಿನ್ನೆಲೆ ಕಾಂಗ್ರೆಸ್‌ನಿಂದ ಇನ್ನೂ ಹಲವರು ಬಿಜೆಪಿ ಬರುವ ಬರುವ ನಿರೀಕ್ಷೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಅನೇಕರು ಬಿಜೆಪಿಗೆ ಮುಂಬರುವ ದಿನಗಳಲ್ಲಿ ಬರಲಿದ್ದು, ಹೆಸರು ಪ್ರಸ್ತಾಪಿಸಿದರೆ ಆ ಪ್ರಕ್ರಿಯೆಗೆ ತೊಂದರೆಯಾಗಲಿದೆ ಎಂದರು.
ಪ್ರಧಾನಿ ಮೋದಿಯವರ ಕೆಲಸಗಳನ್ನು ಮೆಚ್ಚಿರುವ ಭಾರತೀಯ ಇಚ್ಛೆಯಾಗಿದೆ. ಮೋದಿ ಅವರು ದೇಶದ ಭದ್ರತೆ, ದೇಶ ಕಟ್ಟುವ, ಅಭಿವೃದ್ಧಿ ಅಂಜೆಡಾಕ್ಕೆ ಮೆಚ್ಚಿ ಬಿಜೆಪಿಗೆ ಬರಲಿದ್ದಾರೆ ಎಂದು ತಿಳಿಸಿದರು.
ಜಗದೀಶ ಶೆಟ್ಟರ ಅವರು ಏನು ಬೇಡಿಕೆ ಇಟ್ಟಿದ್ದಾರೆ, ಜೋಶಿ ಅವರು ಯಾಕೆ ಭಾಗವಹಿಸಿಲ್ಲ, ಸ್ಥಳೀಯರಲ್ಲಿ ಅಸಮಾಧನ ಕುರಿತು ನನಗೆ ಗೊತ್ತಿಲ್ಲ. ಎಲ್ಲವೂ ವರಿಷ್ಠರ ಮಟ್ಟದಲ್ಲಿ ಚರ್ಚೆಗಳಾಗಿವೆ ಎಂದು ಹೇಳಿದರು.
ಐಎನ್‌ಡಿಐಎ ಒಕ್ಕೂಟದಲ್ಲಿ ಹಿಂದಿನಿಂದಲೂ ಬಿಕ್ಕಟ್ಟು ಇದೆ. ಬೇರೆ ಬೇರೆ ರಾಜ್ಯದಲ್ಲಿ ವಿರೋ ಪಕ್ಷಗಳಾಗಿವೆ. ವಿರೋಧಾಬಾಸ ಇರುವ ಪಕ್ಷಗಳ ಒಗ್ಗೂಡಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ವಿರುದ್ಧ ಮಾಡಲು ಒಗ್ಗೂಡುವ ಪ್ರಯತ್ನ ನಡೆಸಿದ್ದರು. ಆದರೆ ತಮ್ಮ ಅಸ್ತಿತ್ವಕ್ಕಾಗಿ ಪ್ರಾದೇಶಕ ಪಕ್ಷಗಳು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿವೆ ಎಂದರು.
ಕಾಂಗ್ರೆಸ್‌ನಲ್ಲಿ ಆತಂರಿಕ ಕಚ್ಚಾಟ ಈಗಾಗಲೇ ಆರಂಭವಾಗಿದೆ. ಲೋಕಸಭಾ ಚುನಾವಣೆ ವೇಳೆ ಅದು ಇನ್ನೂ ಹೆಚ್ಚಾಗಲಿದೆ. ಪ್ರಧಾನಿ ಮೋದಿ ಅವರು ಮೂರನೇ ಬಾರಿ ಪ್ರಧಾನಿ ಆದ ಮೇಲೆ ಕಾಂಗ್ರೆಸ್ ಇಬ್ಭಾಗ ಆಗಲಿದೆ ಎಂದು ತಿಳಿಸಿದರು.