ಸೊರಬ ಬಿಜೆಪಿ ಕೆಲ ಪ್ರಮುಖರಿಗೆ ಜವಾಬ್ದಾರಿಯಿಂದ ಕೋಕ್ !

ಹೊಸದಿಗಂತ ವರದಿ, ಶಿವಮೊಗ್ಗ :

ಸೊರಬ ಮಂಡಲದ ಕೆಲವು ಕಾರ್ಯಕರ್ತರನ್ನು ಭಾರತೀಯ ಜನತಾ ಪಾರ್ಟಿಯ ವಿವಿಧ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ ಎಂದು  ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುಪ್ರಸನ್ನ ಗೌಡ ಬಾಸೂರು, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠ ಜಿಲ್ಲಾ ಸಂಚಾಲಕರು, ಶಿಕಾರಿಪುರ ಮಂಡಲದ ಸಹ ಪ್ರಭಾರಿ ಹಾಗೂ ಜಿಲ್ಲಾ ವಿಶೇಷ ಆಹ್ವಾನಿತರಾದ  ಎ.ಎಲ್.ಅರವಿಂದ್, ಜಿಲ್ಲಾ ವಿಶೇಷ ಆಹ್ವಾನಿತರು ಹಾಗೂ ಸಾಗರ ನಗರ ಮಂಡಲದ ಪ್ರಭಾರಿ ಗಜಾನನರಾವ್, ಜಿಲ್ಲಾ ವಿಶೇಷ ಆಹ್ವಾನಿತರಾದ ಪಾಣಿರಾಜಪ್ಪ. ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ನಿರಂಜನ ಕುಪ್ಪಗಡ್ಡೆ, ಜಿಲ್ಲಾ ಸಮಿತಿ ಸದಸ್ಯರುಗಳಾದ ಮಲ್ಲಿಕಾರ್ಜುನ ದ್ವಾರಳ್ಳಿ, ಶ್ರೀಪಾದ ಹೆಗಡೆ ನಿಸರಾಣಿ ಮತ್ತು ಎಂ.ಕೆ.ಯೊಗೇಶ್ ಇವರನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಮೇಘರಾಜ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!