ಗಂಟಲು ನೋವು, ಕಿಚ್‌ಕಿಚ್, ಶೀತ, ಕೆಮ್ಮು ಇದೆಲ್ಲ ಬರೋ ವೆದರ್ ಬಂದಾಗಿದೆ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳೋಕೆ ಈ ಕಷಾಯವನ್ನು ದಿನವೂ ಸೇವಿಸಿ..
ಒಂದು ಪಾತ್ರೆಗೆ ನೀರು, ಕೊತ್ತಂಬರಿ ಕಾಳು, ಜೀರಿಗೆ, ಓಂಕಾಳು, ಸೋಂಪು, ಕಾಳುಮೆಣಸು, ಚಕ್ಕೆ, ಲವಂಗ ಹಾಗೂ ಏಲಕ್ಕಿ ಹಾಕಿ ಚೆನ್ನಾಗಿ ಕುದಿಸಿ
ನಂತರ ಅದಕ್ಕೆ ಶುಂಠಿ ಜಜ್ಜಿ ಹಾಕಿ ಕುದಿಸಿ, ತುಳಸಿ ಎಲೆ ಬೇಕಿದ್ದರೆ ಹಾಕಬಹುದು.
ಇದು ಕುದ್ದ ನಂತರ ಆಫ್ ಮಾಡಿ, ಬೆಲ್ಲ ಅಥವಾ ಜೇನುತುಪ್ಪ ಹಾಕಿ ಕುಡಿಯಿರಿ. ಇದು ನಿಮ್ಮ ಇಮ್ಯುನಿಟಿ ಹೆಚ್ಚು ಮಾಡುತ್ತದೆ.