September 14, 2026
Monday, September 14, 2026
spot_img

Soup | ರಾತ್ರಿ ಊಟಕ್ಕೆ ಬೆಸ್ಟ್ ಈ ಹುರುಳಿಕಾಳಿನ ಸೂಪ್

ರಾತ್ರಿ ಹೊಟ್ಟೆ ತುಂಬಿ, ಆದರೆ ಭಾರವಾಗದ ಊಟ ಬೇಕು ಅನ್ನೋರಿಗೆ ಹುರುಳಿಕಾಳಿನ ಸೂಪ್ ಉತ್ತಮ ಆಯ್ಕೆ. ಪ್ರೋಟೀನ್, ನಾರಿನಾಂಶ ಮತ್ತು ಕಬ್ಬಿಣ ಸಮೃದ್ಧವಾಗಿರುವ ಈ ಸೂಪ್ ತೂಕ ಇಳಿಕೆಗೆ ಸಹಕಾರಿ, ಹೊಟ್ಟೆ ತುಂಬಿದ ಭಾವನೆ ಕೊಡುತ್ತದೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.

ಬೇಕಾಗುವ ಪದಾರ್ಥಗಳು:

ಹುರುಳಿಕಾಳು – 1 ಕಪ್
ಬೆಳ್ಳುಳ್ಳಿ – 4-5 ಕಳಿ
ಜೀರಿಗೆ – 1 ಚಮಚ
ಒಣ ಮೆಣಸಿನಕಾಯಿ – 2
ಹುಣಸೆಹಣ್ಣು – ಚಿಕ್ಕ ತುಂಡು
ಈರುಳ್ಳಿ – 1
ಸಾಸಿವೆ, ಕರಿಬೇವಿನ ಸೊಪ್ಪು – ಒಗ್ಗರಣೆಗೆ
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ:

ಮೊದಲು ಹುರುಳಿಕಾಳನ್ನು 7 ರಿಂದ 8 ಗಂಟೆಗಳಕಾಲ ನೆನೆಸಿಟ್ಟುಕೊಳ್ಳಿ. ನಂತರ ಕುಕ್ಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಬೇಯಿಸಿದ ನೀರನ್ನು ಬೇರ್ಪಡಿಸಿ ಇಟ್ಟುಕೊಳ್ಳಿ. ಸ್ವಲ್ಪ ಹುರುಳಿಕಾಳು, ಜೀರಿಗೆ, ಮೆಣಸಿನಕಾಯಿ, ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆ ಮಾಡಿ ಈರುಳ್ಳಿ, ಬೆಳ್ಳುಳ್ಳಿ ಬಾಡಿಸಿ, ರುಬ್ಬಿದ ಮಿಶ್ರಣ ಮತ್ತು ಹುರುಳಿನ ನೀರು ಸೇರಿಸಿ 10 ನಿಮಿಷ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಬಿಸಿ ಬಿಸಿ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !