ಪ್ರವಾಹಕ್ಕೆ ದ.ಆಫ್ರಿಕಾ ತತ್ತರ: 400ಮಂದಿ ಸಾವು, 40,000 ನಿರಾಶ್ರಿತರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರಿಸಿದೆ. ಎಲ್ಲಿ ನೋಡಿದ್ರೂ ಕುಸಿದರುವ ನೆಲ, ಕೊಚ್ಚಿ ಹೋಗಿರುವ ಮನೆ, ಕಟ್ಟಡಗಳು, ಧರೆಗುರುಳಿರುವ ಮರ, ವಿದ್ಯುತ್‌ ಕಂಬಗಳು, ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತವಾಗಿದೆ. ವಿದ್ಯುತ್‌ ಇಲ್ಲದೆ ಜನ ಕತ್ತಲೆಯಲ್ಲು ಬದುಕುತಿದ್ದಾರೆ. ಇದುವರೆಗೂ 400 ಮಂದಿ ಸಾವನ್ನಪ್ಪಿದ್ದು, 40,000ಜನ ನಿರಾಶ್ರಿತರಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

3.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರದಲ್ಲಿ ವಿಪತ್ತು ನಿರ್ವಹಣಾ ತಂಡ ಬೀಡುಬಿಟ್ಟಿವೆ. ಕುಸಿದು ಬಿದ್ದಿರುವ ಮನೆಗಳಿಂದ ಮತದೇಹಗಳನ್ನು ಹೊರತರಲು ಹರಸಾಹಸ ಪಡುತ್ತಿದ್ದಾರೆ. ಪೊಲೀಸರು, ಸೇನೆ ಮತ್ತು ಸ್ವಯಂಸೇವಕರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಕರಾವಳಿ ತೀರ ಪ್ರದೇಶ ಡರ್ಬನ್‌ನ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ರಸ್ತೆಗಳೆಲ್ಲ ಹಾಳಾಗಿವೆ. ಪ್ರವಾಹದಿಂದಾಗಿ ಆಸ್ಪತ್ರೆ ಕಟ್ಟಡಗಳು ಕುಸಿದಿವೆ. ಮನೆಗಳಲ್ಲಿದ್ದವರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ತುರ್ತು ಪರಿಹಾರ ನಿಧಿಯ ಅಡಿಯಲ್ಲಿ ಸರ್ಕಾರವು ಒಂದು ಬಿಲಿಯನ್ ರಾಂಡ್(ಕರೆನ್ಸಿ) ಅನ್ನು ಘೋಷಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!