ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಗಾಗಿ ದಕ್ಷಿಣ ಆಫ್ರಿಕಾ ತಂಡವು 15 ಆಟಗಾರರನ್ನೊಳಗೊಂಡ ಬಲಾಢ್ಯ ಪಡೆಯನ್ನು ಪ್ರಕಟಿಸಿದೆ.
ನಿರೀಕ್ಷೆಯಂತೆಯೇ ತೆಂಬಾ ಬವುಮಾ ನಾಯಕನಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲೂ ಸಾಕಷ್ಟು ಯುವ ಹಾಗೂ ಅನುಭವಿ ಆಟಗಾರರಿಗೆ ಮಣೆ ಹಾಕಲಾಗಿದೆ. ಅದರಲ್ಲೂ ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಕೂಡಿಕೊಂಡಿರುವ ಎಡಗೈ ವೇಗಿ ಗೆರಾರ್ಲ್ಡ್ ಕೋಝಿ ಅವರಿಗೆ ಹರಿಣಗಳ ಪಡೆಯಲ್ಲಿ ಸ್ಥಾನ ನೀಡಲಾಗಿದೆ
ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೇನ್, ಏಯ್ಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್ ಹಾಗೂ ರಾಸ್ಸಿ ವ್ಯಾನ್ ಡರ್ ಡುಸೇನ್ ಸ್ಥಾನ ಪಡೆದಿದ್ದು, ಈ ಎಲ್ಲಾ ಆಟಗಾರರು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿದ್ದಾರೆ.
ಭಾರತದಲ್ಲಿ ಸ್ಪಿನ್ ಸ್ನೇಹಿ ಪಿಚ್ ಅನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕೇಶವ್ ಮಹರಾಜ್ ಹಾಗೂ ತಬ್ರೀಜ್ ಶಂಶಿ ಹೀಗೆ ಇಬ್ಬರು ಸ್ಪಿನ್ನರ್‌ಗಳಿಗೂ 15 ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ ತಂಡ ಹೀಗಿದೆ ನೋಡಿ:
ತೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೇನ್, ಗೆರಾರ್ಲ್ಡ್ ಕೋಝಿ, ಸಿಸಾಂದ ಮಗಲಾ, ಕೇಶವ್ ಮಹರಾಜ್, ಏಯ್ಡನ್ ಮಾರ್ಕ್‌ರಮ್, ಡೇವಿಡ್ ಮಿಲ್ಲರ್, ಲುಂಗಿ ಎಂಗಿಡಿ, ಏನ್ರಿಚ್ ನೋಕಿಯ, ಕಗಿಸೋ ರಬಾಡ, ತಬ್ರೀಜ್ ಸಂಶಿ, ರಾಸ್ಸಿ ವ್ಯಾನ್ ಡರ್ ಡುಸೇನ್.