ಶಿಸ್ತು, ನೈತಿಕತೆ, ಮೌಲ್ಯಗಳಲ್ಲಿ ಬಾಲಿವುಡ್ ಕ್ಕಿಂತ ದಕ್ಷಿಣ ಚಿತ್ರರಂಗ ಬೆಸ್ಟ್: ನಟಿ ಕಾಜಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಛಾಪುಮೂಡಿಸಿರುವ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಸದ್ಯ ಮದುವೆಯ ಬಳಿಕ ಸಿನಿ ಪಯಣದಿಂದ ದೂರ ಉಳಿದಿದ್ದಾರೆ.

ಕೆಲ ವರ್ಷಗಳ ಹಿಂದೆ ಗೌತಮ್ ಕಿಚ್ಚಲು (Gautam Kitchlu) ಅವರನ್ನು ಮದುವೆಯಾಗಿರುವ ನಟಿ, ಕಳೆದ ವರ್ಷ ಏಪ್ರಿಲ್ 19ರಂದು ಗಂಡು ಮಗುವಿನ ಅಮ್ಮ ಆಗಿದ್ದಾರೆ.

2004ರಲ್ಲಿ ಬಿಡುಗಡೆಗೊಂಡಿದ್ದ ‘ಕ್ಯೂನ್ ಹೋ ಗಯಾ ನಾ’ ಎಂಬ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಬಣ್ಣ ಹಚ್ಚಿದ್ದ ನಟಿ, 2007ರಲ್ಲಿ ತೆರೆಗೆ ಬಂದ ಲಕ್ಷ್ಮಿ ಕಲ್ಯಾಣಂ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು ಹಾಗೂ ಸೌತ್ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.

ಸದ್ಯ ಉಮಾ ಎಂಬ ಬಾಲಿವುಡ್​ ಚಿತ್ರದಲ್ಲಿ ಕಾಜಲ್​ ನಟಿಸುತ್ತಿದ್ದಾರೆ. ಈಚೆಗೆ ನಟಿ, ರೈಸಿಂಗ್ ಇಂಡಿಯಾ ಸಮ್ಮಿಟ್ 2023 ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಸಿನಿ ಉದ್ಯಮದ ಕುರಿತು ಅವರು ಮಾತನಾಡಿದ್ದಾರೆ.

‘ಹಿಂದಿ ದೇಶದ ದೊಡ್ಡ ಭಾಷೆಯಾದ ಕಾರಣ ಹಲವಾರು ಕಲಾವಿದರು ಬಾಲಿವುಡ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಬೇಕು ಎಂದು ಆಶಿಸುತ್ತಾರೆ. ಆದರೆ ವಾಸ್ತವದಲ್ಲಿ, ದಕ್ಷಿಣ ಭಾರತದ ಚಿತ್ರರಂಗಗಳು ಸ್ನೇಹದಾಯಕವಾಗಿದ್ದು, ಕಲಾವಿದರನ್ನು ಅಲ್ಲಿಯ ಜನ ಒಪ್ಪಿಕೊಳ್ತಾರೆ ಎಂದೇ ನಾನು ಅಂದುಕೊಂಡವಳು. ಈಗ ನೋಡಿ. ನನ್ನದು ಹಿಂದಿ ಮಾತೃಭಾಷೆ, (Mother toungue) ನಾನು ಬಾಲಿವುಡ್​​ ಚಿತ್ರಗಳಿಂದಲೇ ಬೆಳೆದವಳು. ಹಿಂದಿ ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ ಸಹ. ಆದರೆ ನಾನು ಉತ್ತಮ ವಾತಾರಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತಿನ ವಿಷಯಕ್ಕೆ ಬಂದರೆ ದಕ್ಷಿಣ ಚಿತ್ರರಂಗದಲ್ಲಿ ಇವು ಹೆಚ್ಚಿವೆ. ಈ ಅಂಶಗಳ ಕೊರತೆ ಬಾಲಿವುಡ್‌ನಲ್ಲಿ ಇದೆ ಎಂಬುದು ನನ್ನ ಅನಿಸಿಕೆ’ ಎಂದಿದ್ದಾರೆ.

ದಕ್ಷಿಣದಲ್ಲಿ ಹಲವಾರು ಪ್ರತಿಭಾವಂತ ತಂತ್ರಜ್ಞರಿದ್ದು, ಅದ್ಭುತವಾದ ನಿರ್ದೇಶಕರಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಈ ನಾಲ್ಕೂ ಭಾಷೆಗಳಲ್ಲಿಯೂ ಕಂಟೆಂಟ್ ಹೆಚ್ಚಿದೆ .

ಇದೀಗ ಕಾಜಲ್ ಮಾತು ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಭಾರಿ ವೈರಲ್​ ಆಗಿದ್ದು, ಪರ-ವಿರೋಧಗಳ ಚರ್ಚೆ ಶುರುವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!