ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.95.83 ರಷ್ಟು ಮತದಾನ

ಹೊಸದಿಗಂತ ವರದಿ, ಚಿತ್ರದುರ್ಗ:

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ಸೋಮವಾರ ನಡೆದ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.೯೫.೮೩ರಷ್ಟು ಮತದಾನವಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೭ ಮತಗಟ್ಟೆ ಸ್ಥಾಪಿಸಲಾಗಿದ್ದು, ಒಟ್ಟು ೪೯೧೩ ಶಿಕ್ಷಕ ಮತದಾರರಲ್ಲಿ ೩೩೦೩ ಪುರುಷರು ಹಾಗೂ ೧೪೦೫ ಮಹಿಳೆಯರು ಸೇರಿ ೪೭೦೮ ಶಿಕ್ಷಕ ಮತದಾರರು ಮತ ಚಲಾಯಿಸಿದ್ದಾರೆ.

ಮತಗಟ್ಟೆವಾರು ಮತದಾನದ ವಿವರ: ಮೊಳಕಾಲ್ಮುರು ತಾಲ್ಲೂಕಿನ ತಾಲ್ಲೂಕು ಆಡಳಿತ ಸೌಧದ ಮತಗಟ್ಟೆಯಲ್ಲಿ ೨೨೨ ಪುರುಷರು ಹಾಗೂ ೪೬ ಮಹಿಳಾ ಮತದಾರರು ಸೇರಿದಂತೆ ಒಟ್ಟು ೨೬೮ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೨೧೪ ಪುರುಷರು ೪೪ ಮಹಿಳೆಯರು ಸೇರಿ ಒಟ್ಟು ೨೫೮ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೬.೨೭ರಷ್ಟು ಮತದಾನವಾಗಿದೆ.

ಚಳ್ಳಕೆರೆ ನಗರದ ಬಿಎಂಜಿಹೆಚ್‌ಎಸ್ ಶಾಲೆಯ ಮತಗಟ್ಟೆಯಲ್ಲಿ ೭೫೪ ಪುರುಷರು ಹಾಗೂ ೨೬೫ ಮಹಿಳಾ ಮತದಾರರು ಸೇರಿದಂತೆ ಒಟ್ಟು ೧೦೧೯ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೭೧೦ ಪುರುಷರು ೨೫೩ ಮಹಿಳೆಯರು ಸೇರಿ ಒಟ್ಟು ೯೬೩ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೪.೫೦ರಷ್ಟು ಮತದಾನವಾಗಿದೆ.

ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-೧ರ ಮತಗಟ್ಟೆಯಲ್ಲಿ ೪೮೯ ಪುರುಷರು ಹಾಗೂ ೨೯೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೭೮೧ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೪೬೨ ಪುರುಷರು ೨೮೮ ಮಹಿಳೆಯರು ಸೇರಿ ಒಟ್ಟು ೭೫೦ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೬.೦೩ರಷ್ಟು ಮತದಾನವಾಗಿದೆ.

ಚಿತ್ರದುರ್ಗ ನಗರದ ಬಿ.ಡಿ.ರಸ್ತೆಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ-೨ರ ಮತಗಟ್ಟೆಯಲ್ಲಿ ೫೦೧ ಪುರುಷರು ಹಾಗೂ ೩೨೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೮೨೩ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೪೮೫ ಪುರುಷರು ,೨೯೫ ಮಹಿಳೆಯರು ಸೇರಿ ಒಟ್ಟು ೭೮೦ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೪.೭೮ರಷ್ಟು ಮತದಾನವಾಗಿದೆ.

ಹಿರಿಯೂರು ತಾಲ್ಲೂಕಿನ ತಾಲ್ಲೂಕು ಆಡಳತ ಸೌಧದ ಮತಗಟ್ಟೆಯಲ್ಲಿ ೬೦೧ ಪುರುಷರು ಹಾಗೂ ೨೬೪ ಮಹಿಳಾ ಮತದಾರರು ಸೇರಿದಂತೆ ಒಟ್ಟು ೮೬೫ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೫೮೯ ಪುರುಷರು ೨೫೮, ಮಹಿಳೆಯರು ಸೇರಿ ಒಟ್ಟು ೮೪೭ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೨ರಷ್ಟು ಮತದಾನವಾಗಿದೆ.

ಹೊಸದುರ್ಗ ತಾಲ್ಲೂಕಿನ ತಾಲ್ಲೂಕು ಕಚೇರಿ ಸಭಾಂಗಣದ ಮತಗಟ್ಟೆಯಲ್ಲಿ ೫೦೮ ಪುರುಷರು ಹಾಗೂ ೧೭೨ ಮಹಿಳಾ ಮತದಾರರು ಸೇರಿದಂತೆ ಒಟ್ಟು ೬೮೦ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೪೯೨ ಪುರುಷರು ,೧೬೨ ಮಹಿಳೆಯರು ಸೇರಿ ಒಟ್ಟು ೬೫೪ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೬.೧೮ರಷ್ಟು ಮತದಾನವಾಗಿದೆ.

ಹೊಳಲ್ಕೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಯ ಮತಗಟ್ಟೆಯಲ್ಲಿ ೩೬೭ ಪುರುಷರು ಹಾಗೂ ೧೧೦ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೭೭ ಶಿಕ್ಷಕ ಮತದಾರರು ಇದ್ದು, ಇದರಲ್ಲಿ ೩೫೧ ಪುರುಷರು, ೧೦೫ ಮಹಿಳೆಯರು ಸೇರಿ ಒಟ್ಟು ೪೫೬ ಶಿಕ್ಷಕ ಮತದಾರರು ಮತ ಚಲಾಯಿಸಿದ್ದು, ಶೇ.೯೫.೬೦ರಷ್ಟು ಮತದಾನವಾಗಿದೆ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ , ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!