ಇಂದಿನಿಂದ 3 ದಿನ ಬೆಂಗಳೂರಿನಲ್ಲಿ ಸ್ಪೇಸ್​ ಎಕ್ಸ್​​ಪೋ 2024 ಸಮ್ಮೇಳನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಎಂಟನೇ ಆವೃತ್ತಿಯ ಅಂತರಾಷ್ಟ್ರೀಯ ಬೆಂಗಳೂರು ಸ್ಪೇಸ್​ ಎಕ್ಸ್​​ಪೋ 2024 ಸಮ್ಮೇಳನ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ಈ ಸಮ್ಮೇಳನದಲ್ಲಿ ವಿವಿಧ ದೇಶಗಳ 250ಕ್ಕೂ ಅಧಿಕ ಗಣ್ಯರು ಮತ್ತು ಕಂಪನಿಗಳು ಭಾಗಿಯಾಗಲಿವೆ. ಈ ಅಂತರಾಷ್ಟ್ರೀಯ ಸಮ್ಮೇಳನವನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಯೋಜಿಸಿದೆ.

ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವಾಗಿ ಚರ್ಚಿಸಲು ಮತ್ತು ಹೊಸದನ್ನು ಅನ್ವೇಷಿಸಲು ಸಂಶೋಧಕರಿಗೆ, ಉದ್ಯಮಿಗಳಿಗೆ ಸಮ್ಮೇಳನ ವೇದಿಕೆ ಕಲ್ಪಿಸಿದೆ. ಸಮ್ಮೇಳನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹೊಸ ಅನ್ವೇಷಣೆಗಳು ಅನಾವರಣಗೊಳ್ಳಲಿವೆ.

ಬೆಂಗಳೂರು ಬಾಹ್ಯಾಕಾಶ ಸ್ಪೇಸ್​ ಎಕ್ಸಪೋ 2024 ಇಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿದೆ. ಉದ್ಯಮಿಗಳು ಸಮ್ಮೇಳನಕ್ಕೆ ಯಾವುದೇ ದಿನ ಮತ್ತು ಸಮಯದಲ್ಲಿ ಭೇಟಿ ನೀಡಬಹುದಾಗಿದೆ. ಇನ್ನು, ಸಾಮಾನ್ಯ ಜನರು ಮತ್ತು ವಿದ್ಯಾರ್ಥಿಗಳು ಕೊನೆಯ ದಿನ ಸಮ್ಮೇಳನಕ್ಕೆ ಭೇಟಿ ನೀಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!