ಹೊಸದಿಗಂತ ವರದಿ ಬಾಗಲಕೋಟೆ:
ಯೂತ್ ಕಾಂಗ್ರೆಸ್ ಎಲೆಕ್ಷನ್ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಮಾಡಿದ ಪ್ರತಿಸ್ಪರ್ಧಿ ಮೇಲೆ ಮಾರಣಾಂತಿಕ ಹಲ್ಲೆ ನಗರದಲ್ಲಿ ನಡೆಸಲಾಗಿದೆ.
ಹಳೆ ಬಾಗಲಕೋಟೆಯ ವಿನಾಯಕ ನಗರದ ಬಳಿ ಘಟನೆ ನಡೆದಿದ್ದು ಹಾಲಿ ಅಲಿ ಗಂಜಿ (28) ಮಾರಣಾಂತಿಕ ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.
ವಿಜಯಕುಮಾರ್ ಮುಚಖಂಡಿ, ಗಣೇಶ್ ಮುಚಖಂಡಿ, ಆದಿಲ್ ಅಪ್ಘಾನ್, ಇಕ್ಬಾಲ್ ಇಂಡಿಕರ್, ಮಹೇಶ್ ಜಾಲವಾದಿ ಹಲ್ಲೆ ಮಾಡಿರುವ ಆರೋಪಿಗಳು ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಘಟನೆ ನಡೆದಿದ್ದು ಹಲ್ಲೆಗೊಳಗಾದ ಯುವಕ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಸ್ಥಳಕ್ಕೆ ಶಹರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.