ಚೀನಾ ರಾಕೆಟ್ ಪತನದ ಭೀತಿ: ಸ್ಪೇನ್ ನಲ್ಲಿ ವಿಮಾನ ನಿಲ್ದಾಣಗಳು ಕ್ಲೋಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚೀನಾದ ರಾಕೆಟ್ ವೊಂದು ಬಾಹ್ಯಾಕಾಶದಲ್ಲಿ ನಿಯಂತ್ರಣ ಕಳೆದುಕೊಂಡು ನೆಲಕ್ಕೆ ಅಪ್ಪಳಿಸಲು ಸಿದ್ಧವಾಗಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಸ್ಪೇನ್‌ನ ಹಲವಾರು ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ‘ಲಾಂಗ್ ಮಾರ್ಚ್ 5B (SEZ-5B)’ ಹೆಸರಿನ ರಾಕೆಟ್ ಬಾಹ್ಯಾಕಾಶದಲ್ಲಿ ನಿಯಂತ್ರಣ ತಪ್ಪಿದ್ದು, 20 ಟನ್ ತೂಕದ ರಾಕೆಟ್ ಸ್ಫೋಟಗೊಂಡು ಅದರ ಅವಶೇಷಗಳು (ಶನಿವಾರ) ಎಂದು ಕೆಳಗೆ ಬೀಳಲಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಅದರ ಪರಿಣಾಮ ಶುಕ್ರವಾರವೇ ಕಾಣಿಸಿಕೊಂಡಿದೆ.

ಆದರೆ ಆ ರಾಕೆಟ್‌ನ ಅವಶೇಷಗಳು ನಿಖರವಾಗಿ ಎಲ್ಲಿ ಬೀಳುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಆ ರಾಕೆಟ್ ಸ್ಪ್ಯಾನಿಷ್ ವಾಯುಪ್ರದೇಶವನ್ನು ಪ್ರವೇಶಿಸುವ ಸಾಧ್ಯವಿದೆ ಎಂಬ ಮಾಹಿತಿ ಆಧಾರದ ಮೇರೆಗೆ ಸ್ಪೇನ್ ಆತಂಕಕ್ಕೆ ಒಳಗಾಗಿತ್ತು. ಹಾಗಾಗಿ ಅವರ ವಾಯುಪ್ರದೇಶವನ್ನು ಪ್ರವೇಶಿಸುವ ವಿಮಾನಗಳನ್ನು ನಿಷೇಧಿಸಲಾಗಿದ್ದು, ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಸ್ಪೇನ್ ವಾಯುಪ್ರದೇಶದಲ್ಲಿ ರಾಕೆಟ್ ಅವಶೇಷಗಳು ಬೀಳುವ ಸಂಭವವಿದ್ದು, ಇದರಿಂದ ವಿಮಾನಗಳಿಗೆ ಅಪಾಯವಿದೆ ಎಂದು ಪರಿಗಣಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದರು. ಶನಿವಾರ ಬೆಳಿಗ್ಗೆ ರಾಕೆಟ್‌ನ ತುಣುಕುಗಳು ಬೀಳುವ ಸಾಧ್ಯತೆಯಿದೆ ಇದೆ ಎನ್ನಲಾಗಿತ್ತು. ಆದರೆ ಶುಕ್ರವಾರವೇ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಕೊನೆಗೊಂಡಿರುವುದಾಗಿ ಮಿರರ್ ವರದಿ ಮಾಡಿದೆ.

ರಾಕೆಟ್‌ ತಂದೊಡ್ಡಿದ ಅಪಾಯಸ ಮುನ್ಸೂಚನೆ ಸ್ಪೇನ್‌ನಾದ್ಯಂತ ಇದೇ ಪರಿಸ್ಥಿತಿ ಮುಂದುವರಿದಿದೆ. ಚೀನಾದ ರಾಕೆಟ್ ಅನ್ನು ಮೇ 2020 ರಲ್ಲಿ ಉಡಾವಣೆ ಮಾಡಲಾಯಿತು. ಈ ರಾಕೆಟ್ ಕಳೆದ ತಿಂಗಳು 30 ರಂದು ಸ್ಫೋಟಗೊಂಡಿದೆ. ಇದರಿಂದಾಗಿ ಈ ರಾಕೆಟ್‌ನ ಅವಶೇಷಗಳು ನೆಲದ ಮೇಲೆ ಬೀಳುತ್ತಿವೆ. ಇವುಗಳಲ್ಲಿ ಹೆಚ್ಚಿನವು ಗಾಳಿಯಲ್ಲಿ ಸುಟ್ಟು ಭಸ್ಮವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!