ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದೆ. ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸದಾ ಆರೋಗ್ಯವಾಗಿದ್ದ ಸ್ಪಂದನಾಗೆ ಹೃದಯಾಘಾತ ಆಗಲು ಹೇಗೆ ಸಾಧ್ಯ ಎಂದು ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ. ಸ್ಪಂದನಾ ತನ್ನ ಸ್ನೇಹಿತೆಯರ ಜತೆ ಬ್ಯಾಂಕಾಕ್ ಪ್ರವಾಸ ಕೈಗೊಂಡಿದ್ದರು.
ಶಾಪಿಂಗ್ ಮುಗಿಸಿ ವಾಪಾಸಾಗುವ ವೇಳೆ ಹೊಟೇಲ್ ರೂಂನ ಬಾಗಿಲ ಬಳಿಯೇ ಸ್ಪಂದನಾ ಕುಸಿದು ಬಿದ್ದಿದ್ದಾರೆ.
ಗಾಬರಿಯಾದ ಸ್ನೇಹಿತೆಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸ್ಪಂದನಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟ ವಿಜಯ್ ರಾಘವೇಂದ್ರ ಇದೀಗಾಗಲೇ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಸದಾ ಒಟ್ಟಿಗೇ ಕಾಣಿಸುತ್ತಿದ್ದ ಈ ಜೋಡಿಯನ್ನು ನೋಡಿ ಇಡೀ ಸ್ಯಾಂಡಲ್‌ವುಡ್ ಖುಷಿ ಪಟ್ಟಿತ್ತು. ವಿಧಿ ಕ್ರೂರ, ವಿಜಯ್ ಅವರಿಗೆ ಈ ನೋವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು ಮಾತನಾಡಿದ್ದಾರೆ.