ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವು ಸ್ಯಾಂಡಲ್‌ವುಡ್‌ನಲ್ಲಿ ಎಲ್ಲರಿಗೂ ಆಘಾತಕಾರಿಯಾದ ಸುದ್ದಿಯಾಗಿದೆ.
ಇದೀಗ ಸ್ಪಂದನಾಗೆ ಹೃದಯಾಘಾತವಾಗಲು ಏಕಾಏಕಿ ತೂಕ ಇಳಿಸಿಕೊಂಡಿದ್ದೇ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ. ಸ್ಪಂದನಾ ತೂಕ ಇಳಿಸಿಕೊಳ್ಳಲು ಕೀಟೋ ಡಯಟ್ ಮಾಡಿದ್ದರು. ಕೆಲವೇ ಸಮಯದಲ್ಲಿ 16 ಕೆಜಿ ಇಳಿಸಿಕೊಂಡಿದ್ದರು ಎನ್ನುವ ಬಗ್ಗೆ ಸ್ಪಂದನಾ ಮನೆಯವರು ಮಾತನಾಡಿದ್ದಾರೆ.
ಅವರು ಯಾವ ಡಯಟ್ ಮಾಡ್ತಿದ್ದರು, ಎಷ್ಟು ತೂಕ ಇದ್ದರು ಎನ್ನುವ ವಿಷಯಗಳೆಲ್ಲ ಅವರ ಪರ್ಸನಲ್ ಅದನ್ನು ಬೀದಿಗೆ ಎಳೆಯಬೇಡಿ ಎಂದು ಸ್ಪಂದನಾ ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.