ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ ರಾಘವೇಂದ್ರ (Vijaya Raghavendra) ಪತ್ನಿ ಸ್ಪಂದನಾ (Spandana) ಅವರ ಪಾರ್ಥಿವ ಶರೀರದ ಯಾತ್ರೆ ಮಲ್ಲೇಶ್ವರಂನಲ್ಲಿರುವ ಅವರ ಮನೆಯಿಂದ ಹರಿಶ್ಚಂದ್ರ ಘಾಟ್‍ನತ್ತ ಹೊರಟಿದೆ.
ಇಂದು ಮುಂಜಾನೆ 5.30ಯಿಂದ ಮಧ್ಯಾಹ್ನ 2.30ವರೆಗೆ ಅಂತಿಮ ದರುಶನಕ್ಕೆ ಇಡಲಾಗಿತ್ತು. ಸಿನಿಮಾ ರಂಗದವರು, ರಾಜಕೀಯ ಗಣ್ಯರು ಸೇರಿದಂತೆ ಹಲವಾರು ಮಂದಿ ಸ್ಪಂದನಾ ಅವರ ಅಂತಿಮ ದರುಶನ ಪಡೆದರು.
ಇಂದು ಸಂಜೆ 4 ಗಂಟೆಗೆ ಹರಿಶ್ಚಂದ್ರ ಘಾಟ್‍ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರದ ಯಾತ್ರೆ ಮಲ್ಲೇಶ್ವರಂನಲ್ಲಿರುವ ಅವರ ಮನೆಯಿಂದ ಹರಿಶ್ಚಂದ್ರ ಘಾಟ್‍ನತ್ತ ಹೊರಟಿದೆ.
ದಾರಿಯುದ್ಧಕ್ಕೂ ಜನಸಾಗರವೇ ನಿಂತಿದ್ದು, ಪುಷ್ಪವೃಷ್ಠಿ ಸುರಿಯುತ್ತದೆ. ಕುಟುಂಬಸ್ಥರು ಕೂಡ ಕಣ್ಣೀರ ವಿದಾಯ ಹೇಳುತ್ತಿದ್ದಾರೆ.ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.