ತಾಜ್‌ಮಹಲ್‌ ನೋಡಲು ಬಂದಿದ್ದ ಸ್ಪೈನ್‌ ಯುವತಿಗೆ ಕಚ್ಚಿದ ಮಂಗ; ನೋವು ತಾಳಲಾಗದೆ ಗಳಗಳನೆ ಅತ್ತ ಪ್ರವಾಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿಶ್ವ ವಿಖ್ಯಾತ ತಾಜ್‌ಮಹಲ್‌ನಲ್ಲಿ ಫೋಟೋ ಕ್ಲಿಕ್ಕಿಸುತ್ತಿದ್ದ ಸ್ಪೇನ್ ಮಹಿಳೆಯೊಬ್ಬರ ಮೇಲೆ ಮಂಗಗಳು ದಾಳಿ ನಡೆಸಿವೆ. ಮಹಿಳೆ ನೋವಿನಿಂದ ಅಳುತ್ತಿರುವ ಮತ್ತು ಛಾಯಾಗ್ರಾಹಕರು ಹಾಗೂ ಸ್ಮಾರಕದ ರಕ್ಷಣಾ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಳೆದ 10 ದಿನಗಳಲ್ಲಿ ವಿಶ್ವ ಪಾರಂಪರಿಕ ತಾಣದಲ್ಲಿ ಪ್ರವಾಸಿಗರ ಮೇಲೆ ಮೇಲೆ ಮಂಗಗಳು ದಾಳಿ ನಡೆಸುತ್ತಿರುವುದು ಇದು ನಾಲ್ಕನೇ ಬಾರಿ.
ತಾಜ್‌ಮಹಲ್ ಮುಂಭಾಗದ ರಾಯಲ್ ಗೇಟ್ ಬಳಿ ನಿಂತಿದ್ದ ಯುವತಿಗೆ ಮಂಗಗಳ ದಾಳಿಯಿಂದ ಎಡಗಾಲಿಗೆ ಗಾಯಗಳಾಗಿವೆ. ಆದರೆ, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ನಿರಾಕರಿಸಿ ಆಕೆ ಅಲ್ಲಿಂದ ತೆರಳಿದ್ದಾಳೆ. ಇಲ್ಲಿಯವರೆಗೆ, ಹೆಚ್ಚುತ್ತಿರುವ ಮಂಗಗಳ ಕಾಟಕ್ಕೆ ಯಾವುದೇ ಪರಿಹಾರವನ್ನು ಕಂಡುಹಿಡಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ತಾಜ್‌ಮಹಲ್‌ನ ಎಎಸ್‌ಐನ ಸಂರಕ್ಷಣಾ ಸಹಾಯಕ ರಾಜಕುಮಾರ ವಾಜಪೇಯಿ ಮಾತನಾಡಿ, ಕೋತಿಯ ಚಿತ್ರ ತೆಗೆಯುವಾಗ ಅದು ಮಹಿಳೆಯ ಮೇಲೆ ದಾಳಿ ಮಾಡಿದೆ ಎಂದು ಹೇಳಿದರು. ತಕ್ಷಣವೇ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ಕೋತಿಗಳಿಂದ ಪ್ರವಾಸಿಗರನ್ನು ರಕ್ಷಿಸಲು ಸಿಬ್ಬಂದಿಗಳ ಮೀಸಲು ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಛಾಯಾಗ್ರಾಹಕ ಯೋಗೇಶ್ ಪರಾಸ್ ಈ ಬಗ್ಗೆ ಪ್ರತಿಕ್ರಿಯಿಸಿ, “ಬೆಳಿಗ್ಗೆ 7 ಗಂಟೆ ಸುಮಾರಿಗೆ ಮುಖ್ಯ ಸಮಾಧಿ ಬಳಿ ಮಹಿಳೆ ನೋವಿನಿಂದ ಅಳುತ್ತಿರುವುದನ್ನು ನಾನು ನೋಡಿದೆ. ಆಕೆಯ ಮೇಲೆ ಮಂಗಗಳು ದಾಳಿ ಮಾಡಿದವು. ಒಂದು ಆಕೆಯ ಎಡಗಾಲಿಗೆ ಕಚ್ಚಿದೆ.  ನಾವು ಮುಲಾಮು ಹಚ್ಚಿ ಗಾಯದ ಭಾಗಕ್ಕೆ ಬ್ಯಾಂಡೇಜ್ ಹಾಕಿದೆವು ಎಂದರು.
ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್, “ಮಂಗಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ನಾವು ಜಿಲ್ಲಾಡಳಿತ, ನಾಗರಿಕ ಸಂಸ್ಥೆ ಮತ್ತು ಅರಣ್ಯ ಇಲಾಖೆಗೆ ಪತ್ರ ಬರೆದಿದ್ದೇವೆ. ಕೆಲವರು ಮಂಗಗಳೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಿರುವುದರಿಂದ ಸಮಸ್ಯೆ ಎದರಾಗುತ್ತಿದೆ. ಪ್ರವಾಸಿಗರು ಮಂಗಗಳಿಂದ ದೂರವಿರಲು ಎಚ್ಚರಿಕೆ ನೀಡಲಾಗಿದೆ. ಕೆಲವರು ಮಂಗಗಳೊಂದಿಗೆ ಸೆಲ್ಫಿಗಳಿಗೆ ಪೋಸ್ ಕೊಡುತ್ತಾರೆ ಅದು ಅಪಾಯಕಾರಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!