ದಸರಾ ಹಬ್ಬದ ನಿಮಿತ್ತ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದಸರಾ ಹಬ್ಬದಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯ ಬೆಂಗಳೂರಿನ ಯಶವಂತಪುರ-ಬೆಳಗಾವಿ  ನಡುವೆ ವಿಶೇಷ ರೈಲು ಓಡಿಸಲಿದೆ. ಯಾವ್ಯಾವ ದಿನಾಂಕದಂದು ವಿಶೇಷ ರೈಲು ಸಂಚರಲಿಸಲಿದೆ? ರೈಲು ಸಮಯ ಇಲ್ಲಿದೆ.

ರೈಲು ಸಂಖ್ಯೆ 06507 ಯಶವಂತಪುರ – ಬೆಳಗಾವಿ ವಿಶೇಷ ರೈಲು ಅಕ್ಟೋಬರ್​ 12 ರಂದು ಸಂಜೆ 6:15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ನಸುಕಿನ ಜಾವ 5 ಗಂಟೆಗೆ ಬೆಳಗಾವಿ ತಲುಪಲಿದೆ.

ರೈಲು ಸಂಖ್ಯೆ 06508 ಬೆಳಗಾವಿ – ಯಶವಂತಪುರ ವಿಶೇಷ ರೈಲು ಅಕ್ಟೋಬರ್​ 13 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಯಶವಂತಪುರ ತಲುಪಲಿದೆ

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!