ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿನಿಸ್ಟರ್ ಕೈವಾಡವಿದೆ ಎನ್ನುವುದು ಊಹಾಪೋಹ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರನ್ಯಾ ರಾವ್ ಕೇಸಲ್ಲಿ ಸಚಿವರು ಭಾಗಿಯಾಗಿರುವ ಆರೋಪಗಳು ಬಿಜೆಪಿಯವರ ಊಹಾಪೋಹ. ತನಿಖೆ ವೇಳೆ ಯಾರ ಕೈವಾಡವಿದೆ ಎನ್ನುವುದು ಗೊತ್ತಾಗುತ್ತದೆ. ಎಲ್ಲ ಸತ್ಯ ತನಿಖೆಯಿಂದ ಹೊರಗೆ ಬರಲಿ ಎಂದರು.