ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ವರ್ಷಗಳಲ್ಲಿ ತರಕಾರಿಗಳ ಮೇಲಿನ ಮಾಸಿಕ ವೆಚ್ಚವು ಸರಿಸುಮಾರು ದ್ವಿಗುಣಗೊಂಡಿದೆ ಎಂದು ಆನ್ ಲೈನ್ ನಡೆದ ಸಮೀಕ್ಷೆ ಹೇಳಿದೆ. ಸಮೀಕ್ಷೆಯಲ್ಲಿ ಭಾಗವಹಿಸದವರಲ್ಲಿ 76 ಶೇಕಡಾದಷ್ಟು ಮಂದಿ ಕಳೆದ ಎರಡು ವರ್ಷಗಳಲ್ಲಿ ತಮ್ಮ ಮಾಸಿಕ ತರಕಾರಿ ಬಜೆಟ್ 25-100% ನಡುವೆ ಏರಿಕೆ ಕಂಡಿದೆ ಎಂದು ಹೇಳಿದ್ದಾರೆ ಎಂದು ಫಾರ್ಚೂನ್ ಇಂಡಿಯಾ ವರದಿ ಮಾಡಿದೆ.
ದೇಶದಾದ್ಯಂತ 307 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು 22,000 ಕ್ಕೂ ಹೆಚ್ಚು ಗ್ರಾಹಕರು ಪ್ರತಿಕ್ಷಿಯೆ ನೀಡಿದ್ದಾರೆ. 2020ರಿಂದ 2022ರ ನಡುವಿನಲ್ಲಿ ತರಕಾರಿ ವೆಚ್ಚವು 25 ರಿಂದ 50 ಶೇಕಡಾದಷ್ಟು ಹೆಚ್ಚಾಗಿದೆ 36 ಶೇಕಡಾದಷ್ಟು ಕುಟುಂಬಗಳು ಉತ್ತರಿಸಿವೆ. ಹಾಗೂ 31 ಶೇಕಡಾದಷ್ಟು ಕುಟುಂಬಗಳು 50-100ಶೇಕಡಾ ಹೆಚ್ಚಾಗಿದೆ ಎಂದು ಪ್ರತಿಕ್ರಿಯೆ ನೀಡಿವೆ. ಶೇ.9 ರಷ್ಟು ಕುಟುಂಬಗಳು 100ಶೇ. ವೆಚ್ಚ ಹೆಚ್ಚಾಗಿದೆ ಎಂದು ಉತ್ತರಿಸಿದ್ದಾರೆ.
ಸಮೀಕ್ಷೆ ಬಹಿರಂಗ ಪಡಿಸಿರುವ ಅಂಕಿ ಅಂಶಗಳ ಪ್ರಕಾರ ಸಮೀಕ್ಷೆಗೆ ಒಳಗಾದ ಪ್ರತಿ ಎರಡರಲ್ಲಿ ಒಂದು ಕುಟುಂಬವು ಸರಾಸರಿಯಾಗಿ ಟೋಮ್ಯಾಟೋಗೆ 50 ರೂ. ಈರುಳ್ಳಿಗೆ 30ರೂ. ಮತ್ತು ಆಲೂಗಡ್ಡೆಗೆ 25 ರೂ. ನಷ್ಟು ಪ್ರತಿ ಕೆಜಿಗೆ ಹೆಚ್ಚು ಪಾವತಿಸಿದ್ದಾರೆ. ಇನ್ನು ಕೆಲವರು ಇದಕ್ಕಿಂತಲೂ ಹೆಚ್ಚು ಹಣವನ್ನು ಪಾವತಿಸಿದ್ದಾರೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿದ ಹಣದುಬ್ಬರ ದತ್ತಾಂಶದಿಂದ ಗ್ರಾಹಕ ಮಟ್ಟದಲ್ಲಿ ತರಕಾರಿ ಬೆಲೆ ಏರಿಕೆಯು ಹೆಚ್ಚಾಗಿರುತ್ತದೆ ಎಂದು ಸಮೀಕ್ಷೆಯ ಸಂಶೋಧನೆಗಳು ಸೂಚಿಸುತ್ತವೆ.
NSO ದತ್ತಾಂಶಗಳ ಪ್ರಕಾರ, ಭಾರತದ ಚಿಲ್ಲರೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ 7.41 ಶೇಕಡಾಗೆ ಏರಿದ್ದು ಇದು ಐದು ತಿಂಗಳ ಗರಿಷ್ಠ ಮಟ್ಟವಾಗಿದೆ. ಇದು ಆಹಾರದ ಬೆಲೆಗಳ ಏರಿಕೆಯಿಂದ ಪ್ರೇರಿತವಾಗಿದೆ. ಆಹಾರ ಮತ್ತು ಪಾನೀಯಗಳ ಬೆಲೆ ಸೂಚ್ಯಂಕವು ಮಾಸಿಕ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ 45 ಶೇ.ಕ್ಕಿಂತ ಹೆಚ್ಚು ತೂಕವನ್ನು ಹೊಂದಿದೆ. ಆಹಾರ ಬೆಲೆ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 8.6 ಶೇಕಡಾದಷ್ಟಿತ್ತು, ಇದು ಹಿಂದಿನ ತಿಂಗಳಲ್ಲಿ 7.62 ಶೇಕಡಾದಷ್ಟಿತ್ತು.
ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ 42 ಶೇ.ದಷ್ಟು ಜನರು 1 ನೇ ಹಂತದ ನಗರಗಳಿಂದ, 33 ಶೇಕಡಾದಷ್ಟು ಶ್ರೇಣಿ 2ರ ನಗರಗಳಿಂದ ಮತ್ತು 25ಶೇಕಡಾದಷ್ಟು ಶ್ರೇಣಿ 3, 4 ರ ನಗರಗಳಿಂದ ಮತ್ತು ಗ್ರಾಮೀಣ ಜಿಲ್ಲೆಗಳಿಂದ ಬಂದವರು ಎನ್ನಲಾಗಿದೆ.