ಬೇಕಾಗುವ ಸಾಮಾಗ್ರಿಗಳು:
15 ರಿಂದ 20ರಷ್ಟು ಹಲಸಿನಹಣ್ಣಿನ ತೊಳೆ
ಅಕ್ಕಿ ತರಿ – 1 ಕಪ್
ಬೆಲ್ಲ – 1 ಕಪ್ ಪುಡಿ
ತುಪ್ಪ – 1 ಟೀ ಸ್ಪೂನ್
ಉಪ್ಪು – ಚಿಟಿಕೆ
ಏಲಕ್ಕಿ – ಚಿಟಿಕೆ
ಮಾಡುವ ವಿಧಾನ:
ಹಲಸಿನಹಣ್ಣಿನ ತೊಳೆಗಳ ಬೀಜ ತೆಗೆದು ತೊಳೆಗಳನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನೀರು ಸೇರಿಸಬೇಡಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಅಕ್ಕಿ ತರಿಯನ್ನು ಸೇರಿಸಿ 5 ನಿಮಿಷಗಳ ಕಾಲ ಹುರಿಯಿರಿ. ಮಿಕ್ಸಿಯಲ್ಲಿ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣಕ್ಕೆ ಈ ತರಿಯನ್ನು ಹಾಕಿ ಬೆಲ್ಲ, ಏಲಕ್ಕಿ ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹಾಗೆಯೇ ಇಡಿ.
ನಂತರ ಈ ಮಿಶ್ರಣವನ್ನು ಒಂದು ತಟ್ಟೆಯಲ್ಲಿ ತುಪ್ಪದೊಂದಿಗೆ ಸೇರಿಸಿ ಮತ್ತು ಇಡ್ಲಿ ಬಾಣಲೆಯಲ್ಲಿ ಹಬೆಯಲ್ಲಿ ಬೇಯಿಸಿದರೆ ನೀವು ರುಚಿಕರವಾದ ಹಲಸಿನಹಣ್ಣಿನ ಇಡ್ಲಿ ಸವಿಯಲು ಸಿದ್ಧ.