SPL SWEET | ಹಲಸಿನ ಹಣ್ಣು ಓಕೆ, ಹಲಸಿನ ಹಣ್ಣಿನ ಬೀಜದಲ್ಲಿ ಹಲ್ವಾ ಮಾಡಿದ್ದೀರಾ? ಇಲ್ಲಿದೆ ರೆಸಿಪಿ

ಬೇಕಾಗುವ ಸಾಮಾಗ್ರಿಗಳು:

ಹಲಸಿನ ಬೀಜ – 30

ಬೆಲ್ಲ – 200 ಗ್ರಾಂ

ತುಪ್ಪ, ದ್ರಾಕ್ಷಿ, ಗೋಡಂಬಿ, ಏಲಕ್ಕಿ – 3

ಮಾಡುವ ವಿಧಾನ:

ಮೊದಲು ಪಾತ್ರೆಯಲ್ಲಿ ಹಲಸಿನ ಬೀಜಗಳನ್ನು ನೀರು ಹಾಕಿ ಬೇಯಿಸಿ. ಎಂಟು ನಿಮಿಷ ಬೇಯಿಸಿ ನಂತರ ತಣ್ಣಗಾಗಲು ಬಿಡಿ, ಹೊರಗಿನ ಸಿಪ್ಪೆ ತೆಗೆಯಿರಿ. ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ಬೆಲ್ಲ ಕರಗಿಸಿ. ಹಲಸಿನ ಬೀಜವನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ಕರಗಿಸಿದ ಬೆಲ್ಲವನ್ನೂ ಹಾಕಿ ರುಬ್ಬಿಕೊಳ್ಳಿ.

ನಂತರ ಒಂದು ಪಾತ್ರೆಯಲ್ಲಿ ಅರ್ಧ ಕಪ್ ತುಪ್ಪವನ್ನು ಸೇರಿಸಿ, ರುಬ್ಬಿದ ಮಿಶ್ರಣವನ್ನು ಸೇರಿಸಿ, ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಉರಿಯಲ್ಲಿ ಬೇಯಿಸಿ. ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ತಳ ಬಿಡುತ್ತಾ ಬರುವಾಗ, ತುಪ್ಪಕ್ಕೆ ದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿ ಹುರಿಯಿರಿ. ಪುಡಿಮಾಡಿದ ಏಲಕ್ಕಿ ಸೇರಿಸಿ ಮಿಶ್ರಣ ಮಾಡಿ.

ಬಳಿಕ ಸರ್ವಿಂಗ್ ಪ್ಲೇಟ್ ಗೆ ತುಪ್ಪ ಸವರಿ ಅದಕ್ಕೆ ಹಲ್ವಾ ಹಾಕಿ ಚೆನ್ನಾಗಿ ಸೆಟ್ ಮಾಡಿ, ಒಂದು ಗಂಟೆಗಳ ಕಾಲ ಇಡಿ. ಹಲಸಿನ ಬೀಜದ ಹಲ್ವಾ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!