March 4, 2026
Wednesday, March 4, 2026
spot_img

ಟಿ20 ವಿಶ್ವಕಪ್ ನತ್ತ ಕ್ರೀಡಾಭಿಮಾನಿಗಳ ನೋಟ: ಹೊಸ ದಾಖಲೆ ಬರೆದ ವೀಕ್ಷಕರ ಸಂಖ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಈ ಬಾರಿಯ ಟಿ20 ವಿಶ್ವಕಪ್ ಯಾರ ಪಾಲಾಗಲಿದೆ ಎಂಬ ಕಾತುರ ಪ್ರಪಂಚದಾದ್ಯಂತದ ಅಭಿಮಾನಿಗಳಿದ್ದು, ಈಗಾಗಲೇ ಸೆಮಿ ಫೈನಲ್ ಹಂತದ ವರೆಗೂ ಬಂದು ನಿಂತಿದೆ.

ಇದರ ನಡುವೆ ಪಂದ್ಯಗಳು ರೋಮಾಂಚನಕಾರಿಯಾಗಿದ್ದರಿಂದ ಡಿಜಿಟಲ್ ವೇದಿಕೆಗಳ ಮೂಲಕ ಹೆಚ್ಚಿನ ಜನರು ವೀಕ್ಷಿಸಿದ್ದು, ವೀಕ್ಷಕರ ಸಂಖ್ಯೆ 500 ಮಿಲಿಯನ್ ದಾಟಿದ್ದು, ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗಿನ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಬುಧವಾರ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2026ರ ಪಂದ್ಯಾವಳಿ ಭಾರತದಲ್ಲಿ ವೀಕ್ಷಕರ ಸಂಖ್ಯೆ 500 ಮಿಲಿಯನ್ ದಾಟಿದೆ ಎಂದು ತಿಳಿದು ನನಗೆ ವಿನೀತನಾಗಿದ್ದೇನೆ. ಇದು T20 ವಿಶ್ವಕಪ್‌ ಇತಿಹಾಸದಲ್ಲಿ ಈವರೆಗಿನ ಅತ್ಯಧಿಕ ವೀಕ್ಷಣೆಯಾಗಿದೆ’ ಎಂದು ಶಾ ತಮ್ಮ ‘X’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

‘ಜಿಯೋಹಾಟ್‌ಸ್ಟಾರ್‌ನ ಏಕಕಾಲಿಕ ವೀಕ್ಷಕರು 60.5 ಮಿಲಿಯನ್ ಗರಿಷ್ಠ ಮಟ್ಟವನ್ನು ತಲುಪಿರುವುದನ್ನು ನೋಡುವುದು ಸಹ ಹೃದಯಸ್ಪರ್ಶಿಯಾಗಿತ್ತು. ಇಂದು ರಾತ್ರಿ ಪ್ರಾರಂಭವಾಗುವ ಟೂರ್ನಮೆಂಟ್‌ನ ನಾಕೌಟ್ ಪಂದ್ಯಗಳೊಂದಿಗೆ, ನಮ್ಮ ಕಾರ್ಯಕ್ರಮಗಳಿಗೆ ಭಾರತೀಯ ಅಭಿಮಾನಿಗಳಿಂದ ಸಿಗುವ ಅಪಾರ ಪ್ರೀತಿಯು ಹೆಚ್ಚಿನ ದಾಖಲೆಗಳನ್ನು ಮುರಿಯಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ’ ಎಂದಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಕೂಡ ಬೃಹತ್ ಯಶಸ್ಸು ಕಂಡಿತ್ತು. ಪಂದ್ಯಾವಳಿಯ ಒಟ್ಟು ವೀಕ್ಷಣಾ ಸಮಯ 250 ಬಿಲಿಯನ್ ನಿಮಿಷಗಳನ್ನು ಸಾಧಿಸಿತು ಮತ್ತು ಒಂದು ಹಂತದಲ್ಲಿ, ಗರಿಷ್ಠ 122 ಮಿಲಿಯನ್ ಜನರು ಏಕಕಾಲದಲ್ಲಿ ದೂರದರ್ಶನದಲ್ಲಿ ವೀಕ್ಷಿಸುತ್ತಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !