ಹೊಸದಿಗಂತ ಡಿಜಿಟಲ್ ಡೆಸ್ಕ್
ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾದಲ್ಲಿ ಜನರು ಅತೀ ಪ್ರಮುಖ ಆಹಾರ ವಸ್ತುಗಳಿಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದ್ದು, ಅನೇಕ ಜನರು ಬರಿಗೈಯಲ್ಲಿ ಮರಳುತ್ತಿದ್ದಾರೆ.
ಒಂದೆಡೆ ಆಹಾರದ ಕೊರತೆ ಮಿತಿ ಮೀರಿದ್ದು, ಮತ್ತೊಂದೆಡೆ ಇದ್ದ ಆಹಾರಗಳ ಬೆಲೆ ಗಗನಕ್ಕೆ ಮುಟ್ಟಿದೆ.
ಇತ್ತೀಚಿನ ವಾರಗಳಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ,ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂ. ಇದ್ದರೆ , ತೆಂಗಿನ ಎಣ್ಣೆ ಲೀಟರ್‌ಗೆ 850 ರೂ.ಆಗಿದೆ. ಒಂದು ಮೊಟ್ಟೆಯ ಬೆಲೆ 30 ಹಾಗೂ, 1 ಕೆಜಿ ಹಾಲಿನ ಪುಡಿಯ ಪ್ಯಾಕ್ ಈಗ 1900 ರೂ.ಗೆ ಮಾರಾಟವಾಗುತ್ತದೆ.
ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು ಶೇಕಡಾ 17.5 ಕ್ಕೆ ತಲುಪಿದ್ದು ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ.