Thursday, July 7, 2022

Latest Posts

ಶ್ರೀಲಂಕಾಕ್ಕೆ ಭಾರತ ಸೇನೆ ಕಳಿಸ್ತಿದೆಯಾ?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಆರ್ಥಿಕ ಬಿಕ್ಕಟ್ಟಿನಿಂದ ಅರಾಜಕ ಸ್ಥಿತಿಯಲ್ಲಿರುವ ಶ್ರೀಲಂಕಾಕ್ಕೆ ಭಾರತವು ತನ್ನ ಸೇನೆ ಕಳುಹಿಸುತ್ತಿದೆ ಎಂದು ಶ್ರೀಲಂಕಾದ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ತನ್ನ ರಾಯಭಾರ ಕಚೇರಿ ಮೂಲಕ ಇದನ್ನು ನಿರಾಕರಿಸಿದ್ದು ಮಾತ್ರವಲ್ಲದೇ ಖಂಡಿಸಿರುವ ಭಾರತ, ಇದು ಬೇಜವಾಬ್ದಾರಿ ವರದಿಗಾರಿಕೆಯಾಗಿದ್ದು ಈ ಬಗೆಯ ವದಂತಿಗಳಿಂದ ದೂರವಿರಬೇಕು ಎಂದು ಹೇಳಿದೆ.

ಭಾರತವು ಶ್ರೀಲಂಕಾಕ್ಕೆ ಸೈನಿಕರನ್ನು ಕಳುಹಿಸಲಿದೆ ಎಂದು ಕೆಲವು ಮಾಧ್ಯಮದಲ್ಲಿ ವರದಿಯಾಗಿರುವುದನ್ನು ಭಾರತದ ಹೈ ಕಮೀಷನ್ ನಿರಾಕರಿಸುತ್ತದೆಯಲ್ಲದೇ ಇವು ಸಂಪೂರ್ಣ ನಿರಾಧಾರ ಹಾಗೂ ತಪ್ಪು ಮಾಹಿತಿ ಎಂದು ಹೇಳಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss