Saturday, February 4, 2023

Latest Posts

104 ಮ್ಯಾನ್ಮಾರ್ ಪ್ರಜೆಗಳನ್ನು ರಕ್ಷಿಸಿದ ಶ್ರೀಲಂಕಾ ನೌಕಾಪಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮ್ಯಾನ್ಮಾರ್‌ನಿಂದ ಇಂಡೋನೇಷ್ಯಾಕ್ಕೆ ಪ್ರಯಾಣಿಸುತ್ತಿದ್ದ ಹಡಗು ಶ್ರೀಲಂಕಾ ಜಲಸಂಧಿ ಬಳಿ ಮುಳುಗುವ ಸಂಕಷ್ಟದಲ್ಲಿದ್ದಾಗ ಅತ್ತ ಧಾವಿಸಿದ ಶ್ರೀಲಂಕಾ ನೌಕಾಪಡೆ 104 ಮ್ಯಾನ್ಮಾರ್ ಪ್ರಜೆಗಳನ್ನು ರಕ್ಷಿಸಿದೆ.
ಡಿಸೆಂಬರ್ 18 ರಂದು ಉತ್ತರ ಕರಾವಳಿಯ ವೆಠಲಕರ್ಣಿಯಿಂದ 3.5 ನಾಟಿಕಲ್ ಮೈಲಿ ದೂರದಲ್ಲಿ ಹಡಗಿನಲ್ಲಿದ್ದವರ ರಕ್ಷಣಾ ಕಾರ್ಯ ನಡೆದಿದೆ ಎಂದು ಶ್ರೀಲಂಕಾ ನೌಕಾಪಡೆ ತಿಳಿಸಿದೆ.
ನೌಕಾಪಡೆಯು ಡಿಸೆಂಬರ್ 17 ರ ರಾತ್ರಿ ಹಡಗಿನಲ್ಲಿದ್ದವರಿಂದ ಕರೆಯನ್ನು ಸ್ವೀಕರಿಸಿತ್ತು. ಈ ಹಡಗನ್ನು ಹುಡುಕಲು ಶ್ರೀಲಂಕಾ ನೌಕಾಪಡೆಯ ವೇಗದ ನೌಕೆಗಳಾದ P411 ಮತ್ತು P497 ಅನ್ನು ಕಳುಹಿಸಲಾಗಿತ್ತು ಎಂದು ನೌಕಾಪಡೆ ತಿಳಿಸಿದೆ. ಶ್ರೀಲಂಕಾ ನೌಕಾಪಡೆಯು ದ್ವೀಪದ ಹುಡುಕಾಟ ಮತ್ತು ಪಾರುಗಾಣಿಕಾ ಪ್ರದೇಶದಲ್ಲಿ ಸಮುದ್ರ ಮತ್ತು ಮೀನುಗಾರಿಕೆ ಸಮುದಾಯಗಳಿಗೆ ಸಹಾಯ ಮಾಡಲು ಎಲ್ಲಾ ಸಮಯದಲ್ಲೂ ಸಿದ್ಧವಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!