Monday, October 2, 2023

Latest Posts

ಭಾರತದಲ್ಲಿ ಆಶ್ರಯ ಪಡೆಯಲು ರಾಮೇಶ್ವರಂಗೆ ಬಂದ ಶ್ರೀಲಂಕಾ ತಮಿಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನ (Tamil Nadu) ರಾಮನಾಥಪುರಂ ಜಿಲ್ಲೆಯ ಧನುಷ್ಕೋಡಿಗೆ ಜಾಫ್ನಾ ಮೂಲದ ಐದು ಮಕ್ಕಳು ಸೇರಿದಂತೆ ಎಂಟು ಶ್ರೀಲಂಕಾ ತಮಿಳರ (Sri Lankan Tamils)ಎರಡು ಕುಟುಂಬಗಳು ಶನಿವಾರ ಭಾರತದಲ್ಲಿ ಆಶ್ರಯ ಪಡೆಯಲು ಆಗಮಿಸಿವೆ.

ಶನಿವಾರ ಬೆಳಗ್ಗೆ ರಾಮೇಶ್ವರಂ ಪಕ್ಕದ ಧನುಷ್ಕೋಡಿ ಕರಾವಳಿ ಪ್ರದೇಶಕ್ಕೆ ಶ್ರೀಲಂಕಾ ನಿರಾಶ್ರಿತರು ಆಗಮಿಸಿರುವ ಬಗ್ಗೆ ಅರುಚಲ್ ಮುನೈ ಬಳಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರು ರಾಮೇಶ್ವರಂ ಕೋಸ್ಟಲ್ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮೂಲಕಮಾರ್ಚ್ 2022 ರಿಂದ ಭಾರತಕ್ಕೆ ಆಗಮಿಸಿದ ಒಟ್ಟು ಶ್ರೀಲಂಕಾ ತಮಿಳರ ಸಂಖ್ಯೆ 265 ಕ್ಕೆ ತಲುಪಿದೆ.

ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅರುಚಲ್ ಮುನೈ ಪಾಯಿಂಟ್ ಪ್ರದೇಶದಲ್ಲಿದ್ದ 8 ಜನರನ್ನು ರಕ್ಷಿಸಿದ್ದಾರೆ. ವಿಚಾರಣೆ ವೇಳೆ ನಿರಾಶ್ರಿತರು ಎರಡು ಕುಟುಂಬಗಳಿದ್ದು, ತಮ್ಮನ್ನು ಮರಿಯಾ (35) ಮತ್ತು ಅವರ ಮಕ್ಕಳಾದ ಅಭಿಲಾಷ್ (16), ಅಭಿನಾಷ್ (14) ಮತ್ತು ಸೋತಾನೈ (8) ಗಣೇಶಮೂರ್ತಿ (50) ಅವರ ಪತ್ನಿ ದರ್ಶಿಕಾ (34) ಮಕ್ಕಳಾದ ಆಸ್ನಾಥ್ ( 15) ಮತ್ತು ಯೋಗೇಶ್ (11) ಎಂದು ಗುರುತಿಸಲಾಗಿದೆ.

ಬಡತನದ ಕಾರಣದಿಂದ ತಮಿಳುನಾಡಿಗೆ ಬಂದಿರುವುದಾಗಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ದ್ವೀಪದಲ್ಲಿ ವಾಸಿಸಲು ಬೇರೆ ದಾರಿಯಿಲ್ಲ ಎಂದು ಶ್ರೀಲಂಕಾದ ತಮಿಳರು ಪೊಲೀಸರಿಗೆ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!