ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ರಾಮಲಲಾ ಮೂರ್ತಿ ಪ್ರಾಣಪ್ರತಿಷ್ಠೆ ನಡೆಯಲಿದೆ. ಈ ಸಂದರ್ಭಕ್ಕಾಗಿ ಭಾರತದ ನಾನಾ ರಾಜ್ಯಗಳಲ್ಲಿ ರಜೆ ನೀಡಲಾಗಿದೆ.
ಕೇಂದ್ರ ಸರ್ಕಾರವೂ ಕೂಡ ಅರ್ಧ ದಿನ ರಜೆ ನೀಡಿದೆ, ಆದರೆ ರಾಜ್ಯದಲ್ಲಿ ಯಾವುದೇ ರಜ ನೀಡದಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದೂಗಳ ಸರ್ಕಾರ ಹಿಂದೂಗಳ ಹಬ್ಬಕ್ಕೆ ರಜೆ ನೀಡಿಲ್ಲ ಎಂದು ಹಲವರು ದೂರುತ್ತಿದ್ದಾರೆ. ಈ ಬಗ್ಗೆ ಸಚಿವ ಎನ್. ಚಲುವನಾರಾಯಣಸ್ವಾಮಿ ಮಾತನಾಡಿದ್ದಾರೆ.
ಯಾವ ದೇವರೂ ಕೂಡ ರಜೆ ನೀಡಿ ಎಂದು ಹೇಳಿಲ್ಲ, ಆದರೆ ಕಷ್ಟಪಟ್ಟು ದುಡಿಮೆ ಮಾಡಿ ಎಂದಿದ್ದಾರೆ. ರಜೆ ಬೇಕು ಎಂದು ಪಟ್ಟು ಹಿಡಿದಿರುವುದು ಏಕೆ? ಸರ್ಕಾರಕ್ಕೆ ಶ್ರೀರಾಮಭಕ್ತಿ ಇಲ್ಲ ಅದಕ್ಕೆ ರಜೆ ನೀಡಿಲ್ಲ ಅನ್ನೋದು ಸುಳ್ಳು ಎಂದಿದ್ದಾರೆ.