ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಶ್ರೀಲೀಲಾ ಒಪ್ಪಿಕೊಂಡಿದ್ದ ಬಾಲಿವುಡ್ ಚಿತ್ರದಿಂದ ಹೊರಬಂದಿದ್ದು, ಇದರ ಬೆನ್ನಲ್ಲೇ ಸ್ಟಾರ್ ನಟಿಯ ಪುತ್ರಿ ಎಂಟ್ರಿಯಾಗಿದ್ದಾರೆ .
ತೆಲುಗಿನಲ್ಲಿ ಶ್ರೀಲೀಲಾ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಂತೆ ಬಾಲಿವುಡ್‌ನಿಂದ ಬಂಪರ್ ಆಫರ್‌ಗಳು ಅರಸಿ ಬಂದಿತ್ತು. ಕಾರ್ತಿಕ್ ಆರ್ಯನ್ ನಟನೆಯ ‘ಆಶಿಕಿ 3’ ಮತ್ತು ‘ಪತಿ ಪತ್ನಿ ಔರ್ ಓ 2’ ಸಿನಿಮಾಗೆ ಹೀರೋಯಿನ್ ಆಗಿ ಸೆಲೆಕ್ಟ್ ಮಾಡಲಾಗಿತ್ತು. ಅದರಲ್ಲಿ ‘ಪತಿ ಪತ್ನಿ ಔರ್ ಓ 2’ ಚಿತ್ರದಿಂದ ಶ್ರೀಲೀಲಾರನ್ನು ಕೈಬಿಡಲಾಗಿತ್ತು.
ಇದೀಗ ರವೀನಾ ಪುತ್ರಿ ರಾಶಾರನ್ನು ಚಿತ್ರತಂಡ ಆಯ್ಕೆ ಮಾಡಿದೆ ಎನ್ನಲಾಗಿದೆ. ಕಿಸ್ಸಿಕ್ ಬೆಡಗಿ ಬದಲು ಕಾರ್ತಿಕ್‌ಗೆ ರಾಶಾ ನಾಯಕಿಯಾಗಲಿದ್ದಾರೆ ಎಂಬುದು ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ.