ವಿಶ್ವದ ಅತ್ಯಂತ ಕಠಿಣ ಸೈಕಲ್ ರೇಸ್ ಪೂರ್ಣಗೊಳಿಸಿದ ಕರ್ನಾಟಕದ ಶ್ರೀನಿವಾಸ್ ಗೋಕುಲನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದ ಅತ್ಯಂತ ಕಠಿಣ ಸೈಕಲ್ ರೇಸ್ (ಆರೆಎಎಂ-2023)ನ್ನು ಕರ್ನಾಟಕದ ಅಲ್ಟ್ರಾ ಸೈಕ್ಲಿಸ್ಟ್ ಶ್ರೀನಿವಾಸ್ ಗೋಕುಲನಾಥ್ ಪೂರ್ಣಗೊಳಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ್ ಗೋಕುಲನಾಥ್ ಅವರು ಏರೋಸ್ಪೇಸ್ ಮೆಡಿಸಿನ್ ಸ್ಪೆಷಲಿಸ್ಟ್ ಮತ್ತು ಭಾರತದ ಕೆಲವೇ ಅಲ್ಟ್ರಾ ಸೈಕ್ಲಿಸ್ಟ್‌ಗಳಲ್ಲಿ ಒಬ್ಬರು.

ಶ್ರೀನಿವಾಸ್ ಅವರು 4,800 ಕಿ.ಮೀ ಸೈಕ್ಲಿಂಗ್ ಮಾಡಿ ಈವೆಂಟ್‌ನ ಅಂತಿಮ ಗೆರೆಯನ್ನು ದಾಟಿದ್ದಾರೆ. ಇದಕ್ಕಾಗಿ 11 ದಿನಗಳು ಮತ್ತು 6 ಗಂಟೆಗಳ ಕಾಲ ಸಮಯ ತೆಗೆದುಕೊಂಡಿದ್ದಾರೆ. ಸೈಕ್ಲಿಂಗ್ ಸ್ಪರ್ಧೆಯಲ್ಲಿ ಶ್ರೀನಿವಾಸ್ ಅವರು 7 ನೇ ಸ್ಥಾನ ಗಳಿಸಿದ್ದು, ಅವರ ಸರಾಸರಿ ವೇಗ ಗಂಟೆಗೆ 11.25 ಮೈಲುಗಳಾಗಿದೆ. ಶ್ರೀನಿವಾಸ್ 2017 ರಲ್ಲಿ ಆರೆಎಎಂ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀನಿವಾಸ್ ಹೇಳೋದೇನು?

ಭಾರತೀಯ ಸೈಕ್ಲಿಸ್ಟ್‌ಗಳು ಕಳೆದ ಕೆಲವು ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪರಾಕ್ರಮವನ್ನು ಪ್ರದರ್ಶಿಸಲು ಮತ್ತು ತಮ್ಮ ಸಹಿಷ್ಣುತೆಯನ್ನು ಪರೀಕ್ಷಿಸಲು ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. 3 ಭಾರತೀಯ ಸೈಕ್ಲಿಸ್ಟ್‌ಗಳು ಆರೆಎಎಂ 2023 ರಲ್ಲಿ ಅಂತಿಮ ಗೆರೆಯನ್ನು ದಾಟಿ ಅಗ್ರ 7 ರಲ್ಲಿ ಸ್ಥಾನ ಗಳಿಸಿದ್ದಾರೆ. ಈ ಟ್ರೆಂಡ್  ಹೆಚ್ಚಾಗಲಿದೆ ಮತ್ತು ಜಾಗತಿಕವಾಗಿ ಅಲ್ಟ್ರಾ-ರೇಸಿಂಗ್ ಸಕ್ರ್ಯೂಟ್‌ಗಳಲ್ಲಿ ಹೆಚ್ಚಿನ ಸೈಕ್ಲಿಸ್ಟ್‌ಗಳು ಭಾಗವಹಿಸಿದರೆ ನನಗೆ ಸಂತೋಷವಾಗುತ್ತದೆ. ಹೆಚ್ಚಿನ ಜನರು ಸೈಕ್ಲಿಂಗ್ ಬಗ್ಗೆ ಆಸಕ್ತಿ ತೋರಬೇಕು ಇದಕ್ಕಾಗಿ ಅವರಿಗೆ ಮಾರ್ಗದರ್ಶನ ನೀಡಲು ಬದ್ಧನಾಗಿದ್ದೇನೆ, ನನ್ನ ದೇಶಕ್ಕೆ ಇದೇ ನನ್ನ ಕೊಡುಗೆ. ಉದಯೋನ್ಮುಖ ಅಲ್ಟ್ರಾ-ಸೈಕ್ಲಿಂಗ್ ರೇಸಿಂಗ್ ಉತ್ಸಾಹಿಗಳಿಗೆ ತರಬೇತಿ ನೀಡಲು ಇಚ್ಛಿಸುತ್ತೇನೆ ಎಂದಿದ್ದಾರೆ.

ಪೆಡ್ಲಿಂಗ್ ಹೇಗಿತ್ತು?

ಆರೆಎಎಂ ಒಂದು ಅನುಭವವಾಗಿದೆ, ಅದ್ಭುತವಾದ ಭೂದೃಶ್ಯಗಳನ್ನು ನೋಡಬಹುದು, ಓಟವು ಮುಂದುವರಿದಂತೆ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿ, ಅಮೆರಿಕದ ಕೆಲವು ಅತ್ಯಂತ ಸವಾಲಿನ ಭೂಪ್ರದೇಶಗಳಲ್ಲಿ ಪೆಡಲಿಂಗ್ ಕೌಶಲ್ಯಗಳನ್ನು ಪರೀಕ್ಷಿಸುತ್ತದೆ ಹಾಗೂ ವೇಗವನ್ನು ನಿಯಂತ್ರಿಸಿಕೊಳ್ಳಬೇಕು. ರೇಸರ್‌ಗೆ ತಾಳ್ಮೆಯೂ ಇರಬೇಕು ಹಾಗೇ ಅವರ ಪಾದಗಳ ಮೇಲೆ ಹಿಡಿತವೂ ಇರಬೇಕು ಎಂದಿದ್ದಾರೆ.

ವಿಶ್ವದ ಅತಿ ಉದ್ದದ ರೇಸ್
ಆರೆಎಎಂ ಅಮೆರಿಕದಾದ್ಯಂತ ನಡೆಯುವ ಅಲ್ಟ್ರಾ- ಡಿಸ್ಟೆನ್ಸ್ ಸೈಕ್ಲಿಂಗ್ ರೇಸ್ ಆಗಿದೆ, ಇದನ್ನು ವಿಶ್ವದ ಅತಿ ಉದ್ದದ ರೇಸ್ ಎನ್ನಲಾಗುತ್ತದೆ. ಅಮೆರಿಕದ ಪಶ್ಚಿಮ ಕರಾವಳಿಯಿಂದ ಅದರ ಪೂರ್ವ ಕರಾವಳಿಯವರೆಗೆ, ಅಮೆರಿಕದ ವಿವಿಧ ಭೂಪ್ರದೇಶಗಳಲ್ಲಿ ಸುಮಾರು 4,800 ಕಿ.ಮೀ. ರೇಸ್ ಇರುತ್ತದೆ. ಇಲ್ಲಿ ಯಾವುದೇ ಹಂತಗಳಿಲ್ಲ. ವೇಗದ ಸ್ಪರ್ಧಿಗಳು ರೇಸ್‌ನಲ್ಲಿ ಮೊದಲು ಬರುತ್ತಾರೆ. ರೇಸ್ ಮುಗಿಸಲು ಒಂದು ವಾರಕ್ಕೂ ಹೆಚ್ಚು ಸಮಯ ಬೇಕು. ಸೋಲೋ ಓಟ ಪೂರ್ಣಗೊಳಿಸಲು 12 ದಿನಗಳು ಬೇಕಾಗುತ್ತದೆ. ಇದೊಂದು ಅತ್ಯದ್ಭುತ ಅನುಭವ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!