ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗ ಕುಸಿದು ಮಣ್ಣಿನಡಿ ಸಿಲುಕಿ ಕೊಂಡಿರುವ ಎಂಟು ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ರ‍್ಯಾಟ್ ಮೈನರ್ಸ್, ನೌಕಾಪಡೆ, ಸೇನೆ, ಎನ್ ಡಿಆರ್ ಎಫ್ ಮತ್ತು ಇತರ ಸಂಸ್ಥೆಗಳ ಕಮಾಂಡೋಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನೀರು ಮತ್ತು ಮಣ್ಣು ಒಟ್ಟಿಗೆ ಸೋರಿಕೆಯಾಗಿ ದಪ್ಪ ಕೆಸರಿನ ಗೋಡೆ ನಿರ್ಮಾಣವಾಗಿದ್ದು, ಇದು ರಕ್ಷಣಾ ಕಾರ್ಯಕ್ಕೆ ಅಡ್ಡಿ ಮಾಡುತ್ತಿದೆ.
ಕೆಸರು ಮಣ್ಣು ಜಾರಿದಲ್ಲಿ ಹೂಳು ಗುಂಡಿಯಂತಾಗಿದೆ. ಈ ಅವಶೇಷಗಳಲ್ಲಿ ಲೋಹ, ಕಾಂಕ್ರೀಟ್, ಸರಳುಗಳಂತಹ ಚೂಪಾದ ಲೋಹಗಳು ಮಿಶ್ರಣಗೊಂಡಿವೆ. ಹೀಗಾಗಿ ಅದರೊಳಗೆ ಹೋಗಲು ಪ್ರಯತ್ನಿಸಿದರು ಗಾಯಗೊಳ್ಳುವುದು ಖಚಿತ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕೆಸರಿನ ಗೋಡೆಯ ಮೂಲಕ ಜನರನ್ನು ಕಾಂಟಾಕ್ಟ್ ಮಾಡುವ ತಂತ್ರಜ್ಞಾನ ನಮ್ಮಲ್ಲಿಲ್ಲ. ಇಲ್ಲಿಯವರೆಗೆ ಸಿಕ್ಕಿಬಿದ್ದ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಸಾಧಿಸಲು ನಮಗೆ ಸಾಧ್ಯವಾಗಿಲ್ಲ, ಎಂದು ಬೆಟಾಲಿಯನ್ ಕಮಾಂಡೆಂಟ್ ಪ್ರಸನ್ನ ಕುಮಾರ್ ಹೇಳಿದ್ದಾರೆ.