ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದಡಿ ಸಿಲುಕಿರುವ ಏಳು ಮಂದಿಯನ್ನು ಪತ್ತೆ ಹಚ್ಚುವ ಕಾರ್ಯಾಚರಣೆ 21ನೇ ದಿನವೂ ತ್ವರಿತ ಗತಿಯಲ್ಲಿ ಮುಂದುವರಿದಿದೆ.
ಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್.ಎಫ್. ಎಚ್‌ಆರ್‌ಡಿಡಿ, ಸಿಂಗರೇನಿ ಕೊಲಿಯೆರಿಸ್ ಮತ್ತು ಹೈದರಾಬಾದ್‌ನ ರೋಬೊಟಿಕ್ ಕಂಪನಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಮನುಷ್ಯರಿಗೆ ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ 15 ಪಟ್ಟು ನಿಖರತೆಯೊಂದಿಗೆ ರೋಬೊಗಳು ಕೆಲಸ ಮಾಡುತ್ತಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೆಲವು ಸ್ಥಳಗಳಲ್ಲಿ ಸರ್ಕಾರಿ ಸ್ವಾಮ್ಯದ ಸಿಂಗರೇನಿ ಕೊಲಿಯೆರಿಸ್ ರಕ್ಷಣಾ ಸಿಬ್ಬಂದಿ ಮತ್ತು ರ‍್ಯಾಟ್ ಮೈನರ್ ಗಳು ಅಗಿಯುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.