August 30, 2026
Sunday, August 30, 2026
spot_img

ಬಿಜೆಪಿಗೆ ಸಹಾಯ ಮಾಡೋಕೆ ಹೋಗಿ ಜಮೀರ್‌ ಹೀಗೆ ಮಾಡಿದಾರೆ ಎಂದ ಎಸ್‌ಎಸ್‌ ಮಲ್ಲಿಕಾರ್ಜುನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಜೆಪಿಗೆ ಸಹಾಯ ಮಾಡೋಕೆ ಹೋಗಿ ಜಮೀರ್‌ ಅಹ್ಮದ್‌ ಇಂಥ ಕೆಲಸ ಮಾಡಿದ್ದಾರೆ, ಇದು ಪಕ್ಷದ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಮಾಜಿ ಸಚಿವ ಎಸ್‌ಎಸ್‌ ಮಲ್ಲಿಕಾರ್ಜುನ್‌ ಆಕ್ರೋಶ ಹೊರಹಾಕಿದ್ದಾರೆ.

ದಾವಣಗೆರೆ ಉಪಚುನಾವಣೆಯಲ್ಲಿ ಜಮೀರ್‌ ಅಹ್ಮದ್ ಕಾಂಗ್ರೆಸ್‌ ವಿರುದ್ಧ ಚಟುವಟಿಕೆ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್‌ ಆಗಿದೆ. ಜಮೀರ್‌ ಹಾಗೂ ಸಿರಾಜ್‌ ನಡುವಿನ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಜಮೀರ್‌ ಇದು ನನ್ನ ದನಿ ಅಲ್ಲ ಎಐ ಎಂದು ಹೇಳಿದ್ದಾರೆ.

ಆಡಿಯೋದಲ್ಲಿ ದಾವಣಗೆರೆ ಉಪಚುನಾವಣೆಯಲ್ಲಿ ಕುಕ್ಕರ್‌ಗೆ ವೋಟ್‌ ಬೀಳಬೇಕು ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಆಡಿಯೋದಲ್ಲಿ ಮುಸ್ಲಿಮರೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಬದಲಾಗಿ ಪಕ್ಷೇತರರಿಗೆ ವೋಟ್‌ ಹಾಕಬೇಕು ಎಂದು ಆಗ್ರಹಿಸುವುದು ಎಂದು ಹೇಳಿದ್ದಾರೆ ಎನ್ನ. ಒಂದು ವೇಳೆ ಮುಸ್ಲಿಮರು ವೋಟ್‌ ಹಾಕಿಲ್ಲ ಅಂದ್ರೂ ಓಕೆ, ಕಾಂಗ್ರೆಸ್‌ ವೋಟ್‌ ಗಳು ಮೈನಸ್‌ ಆಗಬೇಕು.

ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ವೋಟ್ ಹಾಕಬೇಡಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ವೋಟ್ ಹಾಕಿಸಬೇಡಿ ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !