April 23, 2026
Thursday, April 23, 2026
spot_img

ಎಸ್‌ಎಸ್‌ಎಲ್‌ಸಿ ರೀ ಎಕ್ಸಾಂ ಯಾವಾಗ? ಈ ಬಾರಿ ಮೂರನೇ ಪರೀಕ್ಷೆ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಈಗಷ್ಟೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಅನುತ್ತೀರ್ಣಗೊಂಡ ಮಕ್ಕಳಿಗೆ ಪರೀಕ್ಷೆ ಬರೆಯೋದಕ್ಕೆ ಮತ್ತೆ ಅವಕಾಶ ಇದೆ.

ಮುಂದಿನ ತಿಂಗಳು 18ರಿಂದ ರೀ ಎಕ್ಸಾಂ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ತಯಾರಾಗಲು ಸಾಕಷ್ಟು ಸಮಯವಿದೆ.

ಇನ್ನು ಈ ಬಾರಿ ಮೂರನೇ ಪರೀಕ್ಷೆ ಇರೋದಿಲ್ಲ. ಎರಡನೇ ಬಾರಿಯಲ್ಲಿಯೇ ಪರೀಕ್ಷೆಯನ್ನು ಪಾಸಾಗಬೇಕು. ಅದು ಸಾಧ್ಯವಾಗದಿದ್ದರೆ ಮತ್ತೆ ಮುಂದಿನ ವರ್ಷ ಪರೀಕ್ಷೆ ಬರೆಯಬೇಕಿದೆ.

ಮಕ್ಕಳು ಯಾವ ಭಾಷೆಯಲ್ಲಿ ಫೇಲ್‌ ಆಗಿದ್ದಾರೆ. ಅವರಿಗೆ ಯಾವ ವಿಷಯ ಕಷ್ಟವಾಗುತ್ತಿದೆ ಎಂದು ಅರಿತುಕೊಂಡು ಇನ್ನಷ್ಟು ತರಬೇತಿಯನ್ನು ಕೊಡಿಸಲಾಗುತ್ತದೆ. ಮಕ್ಕಳನ್ನು ಪಾಸ್‌ ಮಾಡಿಸುವ ಜವಾಬ್ದಾರಿಯನ್ನು ಶಿಕ್ಷಕರು ಹಾಗೂ ಸಂಬಂಧಪಟ್ಟ ಇಲಾಖೆ ತೆಗೆದುಕೊಳ್ಳಲಿದೆ.

ಮೇ.18ರಿಂದ ಪರೀಕ್ಷೆ ಆರಂಭವಾಗಲಿದೆ. ಯಾವ ದಿನ ಯಾವ ವಿಷಯದ ಪರೀಕ್ಷೆ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !