ಸ್ಟಾರ್ ನಟಿಗೆ ಅಶ್ಲೀಲ ಕಮೆಂಟ್ ಕಿರುಕುಳ: ಮಲೆಯಾಳಂ ಹೀರೋಯಿನ್ ಏನು ಮಾಡಿದ್ರು ಗೊತ್ತಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೇಸ್​​ ನಲ್ಲಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್​​ ಮಾಡಿದ್ದಲ್ಲಿಂದ ಶುರುವಾದ ಪ್ರಕರಣ ಪಟ್ಟಣಗೆರೆ ಶೆಡ್​ಗೆ ತಲುಪಿ ಕೊಲೆಯಲ್ಲಿ ಅಂತ್ಯವಾಗಿದೆ.

ಇತ್ತ ಪವಿತ್ರಾಗೌಡ ರೀತಿ ಮತ್ತೊಬ್ಬ ನಟಿಗೆ ಮೆಸೇಜ್ ಕಾಟ ಶುರುವಾಗಿದೆ. ಮಲೆಯಾಳಂ ನಟಿ ಹನಿರೋಸ್​ಗೆ ಕಿರಾತಕರು ಕೆಟ್ಟ ಕೆಟ್ಟದಾಗಿ ಕಮೆಂಟ್ಸ್ ಮಾಡಿ ಕಿರುಕುಳ ನೀಡ್ತಿದ್ದಾರಂತೆ.

ಆದ್ರೆ ಕಮೆಂಟ್ಸ್ ಮಾಡಿದವರ ವಿರುದ್ಧ ಸಮರ ಸಾರಿದ ನಟಿ ಹನಿ ರೋಸ್ ಪವಿತ್ರಾ ಗೌಡ ರೀತಿ ಕಾನೂನನ್ನು ಕೈಗೆತ್ತಿಕೊಳ್ಳದೇ ನೇರವಾಗಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಈ ನಟಿ ಬರೊಬ್ಬರಿ 30 ಮಂದಿ ಕಮೆಂಟ್ಸ್​ ಕಿರಾತಕರ ವಿರುದ್ಧ ನೀಡಿದ್ದಾರೆ.

ಸದ್ಯ 30 ಮಂದಿಯ ವಿರುದ್ಧ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ನಟಿ ಹನಿರೋಸ್ ದೂರು ದಾಖಲಿಸಿದ್ದಾರೆ. ಹನಿರೋಸ್ ದೂರ ಆಧರಿಸಿ ಸದ್ಯ ಕೊಚ್ಚಿ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಅಶ್ಲೀಲವಾಗಿ ಕಮೆಂಟ್ ಮಾಡಿದ ಅಕೌಂಟ್​ಗಳ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು. ಒಟ್ಟು ಮೂವತ್ತು ಅಕೌಂಟ್​​ಗಳ ಜನ್ಮ ಜಾಲಾಡಿದ್ದಾರೆ. ಸದ್ಯಲ್ಲಿಯೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೊಚ್ಚಿ ಪೊಲೀಸರು ಸಜ್ಜಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಡಿರುವ ನಟಿ ಹನಿರೋಸ್, ಆರೋಪಿಗಳ ಮಾಹಿತಿ ಕಲೆ ಹಾಕಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಹನಿರೋಸ್ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!