ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬರುವ ಏಕದಿನ ವಿಶ್ವಕಪ್ ಗಾಗಿ ಎಲ್ಲಾ ತಂಡಗಳು ಸಿದ್ದತೆಯಲ್ಲಿ ತೊಡಗಿದ್ದು, ಇತ್ತ ಆಸ್ಟ್ರೇಲಿಯಾ ಕೂಡ ಪ್ಲಾನ್ ನಡೆಸುತ್ತಿದ್ದು, ಈ ನಡುವೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಗಾಯಗೊಂಡಿದ್ದಾರೆ. ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ ಆಟಗಾರರ ಇಂಜುರಿ ಆಸೀಸ್ ಪಾಳಯದಲ್ಲಿ ಆತಂಕ ಹುಟ್ಟಿಸಿದೆ.
ಸ್ಮಿತ್ ಸ್ನಾಯುರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ನಾಲ್ಕು ವಾರಗಳ ಕಾಲ ಹೊರಗುಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ಡಬ್ಲ್ಯುಟಿಸಿ ಫೈನಲ್ ಮತ್ತು ಆ್ಯಶಸ್ ಸರಣಿಯ ನಂತರ ತೊಡೆಸಂದು ನೋವಿಗೆ ತುತ್ತಾಗಿದ್ದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ.

ಆಸೀಸ್ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಇಂಜುರಿಗೊಳಗಾಗಿದ್ದರು. ಹೀಗಾಗಿ ಅವರು ಸಹ ಆಫ್ರಿಕಾ ಸರಣಿಯಲ್ಲಿ ಆಡುತ್ತಿಲ್ಲ. ಇದೀಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಇವರಿಬ್ಬರು ಫಿಟ್ ಆಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಗೆ ಸ್ಮಿತ್ ಹಾಗೂ ಸ್ಟಾರ್ಕ್ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ ಎಂದು ತಂಡದ ಮುಖ್ಯ ಆಯ್ಕೆಗಾರ ಬೈಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಟಿ20 ತಂಡದ ನಾಯಕನಾಗಿ ಬಡ್ತಿ ಪಡೆದಿದ್ದ ಮಾರ್ಷ್, ಇದೀಗ ಕಮ್ಮಿನ್ಸ್ ಬದಲಾಗಿ ಏಕದಿನ ಸರಣಿಯಲ್ಲೂ ತಂಡವನ್ನು ಮುನ್ನಡೆಸಲಿದ್ದಾರೆ.