ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಶಾರುಖ್ ಖಾನ್ ನಟಿಸಿರುವ ಡಂಕಿ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಇದಕ್ಕೆ ಜನ ಉತ್ತಮ ರೆಸ್ಪಾನ್ಸ್ ನೀಡಿದ್ದು, ಥಿಯೇಟರ್‌ಗೆ ಬರೋಕೆ ಕಾಯ್ತಿದ್ದೀವಿ ಎಂದು ಹೇಳಿದ್ದಾರೆ.
ಈ ಮಧ್ಯೆ ನೆಟ್ಟಿಗನೊಬ್ಬ ಶಾರುಖ್ ಅನ್ನೋ ಸ್ಟಾರ್‌ಡಮ್ ಸಾಕು ನಿಮ್ಮ ಸಿನಿಮಾ ಹಿಟ್ ಆಗೋದಕ್ಕೆ, ಒಳ್ಳೆ ಪ್ರಚಾರದಿಂದ ಕೆಟ್ಟ ಸಿನಿಮಾಗಳನ್ನು ಹಿಟ್ ಮಾಡಿಕೊಳ್ತಿರಿ, ಜವಾನ್, ಪಠಾಣ್ ಕೂಡ ಹೀಗೆ ಹಿಟ್ ಆಗಿದ್ದು. ಇದೀಗ ಡಂಕಿ ಸರದಿ ಎಂದು ಕಮೆಂಟ್ ಮಾಡಲಾಗಿದೆ.
ಈ ರೀತಿ ಸಾಕಷ್ಟು ಕಮೆಂಟ್‌ಗಳು ಸ್ಟಾರ್‌ಗಳ ಫೋಟೊಗೆ ಬರುತ್ತವೆ. ಆದರೆ ಯಾವ ಸೆಲೆಬ್ರಿಟಿ ಕೂಡ ಇದಕ್ಕೆ ಉತ್ತರ ಕೊಡೋದಿಲ್ಲ. ಆದರೆ ಶಾರುಖ್ ಖಾನ್ ಇದಕ್ಕೆ ಉತ್ತರ ನೀಡಿದ್ದಾರೆ. ನಿನ್ನಂತಹ ಅತಿ ಬುದ್ಧಿವಂತನಿಗೆ ಏನು ಹೇಳಬೇಕೋ ಗೊತ್ತಿಲ್ಲ. ನಿಂಗ್ಯಾಕೋ ಮಲಬದ್ಧತೆ ಸಮಸ್ಯೆ ಇದೆ ಅನಿಸ್ತಾ ಇದೆ, ನನ್ನ ಪ್ರಚಾರದ ತಂಡ ನಿನಗೆ ಔಷಧ ಕಳಿಸುತ್ತದೆ ಬೇಗ ಹುಷಾರಾಗು ಎಂದು ತಮಾಷೆಯಾಗಿ ಹೇಳಿದ್ದಾರೆ.