ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಲೀಗ್ ಪಂದ್ಯ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರೀಡಾಂಗಣ ಅಭಿಮಾನಿಗಳು, ಸೆಲೆಬ್ರೆಟಿಗಳು, ಗಣ್ಯರು ಆಗಮಿಸಿದ್ದಾರೆ.
ರಾಜಕೀಯ ಒತ್ತಡಗಳ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೂಡ ಪಂದ್ಯ ನೋಡಲು ಆಗಮಿಸಿದ್ದು, ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಡಾ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ ಸಾಥ್ ನೀಡಿದ್ದಾರೆ.
ಇನ್ನು ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡಲು ಮಾಜಿ ಕ್ರಿಕೆಟಿಗ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಹಾಜರಾಗಿದ್ದಾರೆ. ವಿಶೇಷ ಅಂದರೆ ಇತ್ತ ಕಾಂತಾರಾ ನಟ ರಿಷಬ್ ಶೆಟ್ಟಿ ಹಾಗೂ ಗೇಲ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಕೂಡ ಆರ್‌ಸಿಬಿಗೆ ಬೆಂಬಲ ಸೂಚಿಸಿದ್ದಾರೆ. ಆರ್‌ಸಿಬಿ ಜರ್ಸಿ ಹಾಕಿ ಇಂದು ಆರ್‌ಸಿಬಿ ಪಂದ್ಯ ಗೆದ್ದೇ ಗೆಲ್ಲುತ್ತೆ ಎಂದಿದ್ದಾರೆ.
ಇತ್ತಿಚೆಗೆ ನಡೆದ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬೆ ಟ್ರೋಫಿ ಕಿರೀಟ ತಂದುಕೊಟ್ಟ ಆರ್‌ಸಿಬಿ ಮಹಿಳಾ ತಂಡ ಕೂಡ ಕ್ರೀಡಾಂಗಣದಲ್ಲಿ ಹಾಜರಾಗಿದೆ.
ಪ್ಲೇ ಆಫ್ ಪ್ರವೇಶಿಸಲು ಆರ್‌ಸಿಬಿ ಪಂದ್ಯದಲ್ಲಿಉತ್ತಮ ರನ್‌ರೇಟ್ ಜೊತೆ ಚೆನ್ನೈ ತಂಡವನ್ನು ಮಣಿಸಬೇಕು. ಹೀಗಾಗರೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿ ಪ್ಲೇ ಆಫ್ ಸ್ಥಾನ ಖಚಿತವಾಗಲಿದೆ.