ರಾಜ್ಯ ಚುನಾವಣೆ: ಬೀದರ್ ಕಣದಲ್ಲಿ 63 ಅಭ್ಯರ್ಥಿಗಳು

ಹೊಸದಿಗಂತ ವರದಿ,ಬೀದರ್:

ಸಾರ್ವತ್ರಿಕ ವಿಧಾನ ಸಭಾ ಚುನಾವಣೆ–2023ರ ಬೀದರ ಜಿಲ್ಲೆಯ 6 ವಿಧಾನ ಸಭಾ ಕ್ಷೇತ್ರದಿಂದ ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಏಪ್ರಿಲ್ 24 ರಂದು 9 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದು, ಅತಿಂಮವಾಗಿ 63 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

47-ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಾಮಪತ್ರವನ್ನು ಹಿಂಪಡೆದಿದ್ದು, 10 ಅಭ್ಯರ್ಥಿಗಳು ಕಣದಲ್ಲಿ ಮುಂದುವರೆದಿದ್ದಾರೆ.

49- ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಅಮಿತ ತಂದೆ ಬಾಲಾಜಿ ಹಾಗೂ ಬಸವರಾಜ ತಂದೆ ಭೀಮಣ್ಣಾ ನಾಮಪತ್ರ ಹಿಂಪಡೆದಿದ್ದಾರೆ ಮತ್ತು 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

50-ಬೀದರ ವಿಧಾನಸಭಾ ಕ್ಷೇತ್ರದಿಂದ ಶೇಕ್ ಹಾಜಿ ಮನಿಯಾರ, ಸೈಯದ ವಹೀದ ಲಖನ್, ಅಲಿ ಮಹಮ್ಮದ್ ಖಾನ್ ಹಾಗೂ ರಮೇಶ ಪಾಸ್ವಾನ್ ಅವರು ತಮ್ಮ ನಾಮಪತ್ರ ಹಿಂಪಡೆದಿದ್ದಾರೆ ಹಾಗೂ 11 ಅಭ್ಯರ್ಥಿಗಳು ಕಣದಲ್ಲಿ ಮುಂದುವರೆದಿದ್ದಾರೆ.

52-ಔರಾದ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ ಮರೇಪ್ಪ ಹಾಗೂ ವಿಜಯಕುಮಾರ ಪುಂಡಲೀಕ್ ನಾಮಪತ್ರ ಹಿಂಪಡೆದಿದ್ದಾರೆ. 12 ಅಭ್ಯರ್ಥಿಗಳು ಕಣದಲ್ಲಿ ಮುಂದುವರೆದಿದ್ದಾರೆ.

ಉಳಿದ ಕ್ಷೇತ್ರಗಳಾದ 48-ಹುಮನ್ನಾಬಾzನಲ್ಲಿ 7 ಅಭ್ಯರ್ಥಿಗಳು. 51-ಭಾಲ್ಕಿ 13 ಅಭ್ಯರ್ಥಿಗಳು ಕಣದಲ್ಲಿದ್ದು, ಇಲ್ಲಿ ಯಾವುದೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿಲ್ಲ ಹಾಗೂ ಬೀದರ ಜಿಲ್ಲೆಯಲ್ಲಿ ಒಟ್ಟು 63 ಅಭ್ಯರ್ಥಿಗಳು ಕಣದಲ್ಲಿ ಮುಂದುವರೆದಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!