ರಾಜ್ಯ ಚುನಾವಣೆ: ವಿಜಯಪುರದ ಅಂತಿಮ ಕಣದಲ್ಲಿ 95 ಅಭ್ಯರ್ಥಿಗಳು

ಹೊಸದಿಗಂತ ವರದಿ,ವಿಜಯಪುರ:

ವಿಧಾನಸಭಾ ಚುನಾವಣೆ ಹಿನ್ನೆಲೆ ನಾಮಪತ್ರ ವಾಪಸ್ ಪಡೆಯುವ ಕೊನೆಯ ದಿನವಾದ ಸೋಮವಾರ ಜಿಲ್ಲೆಯ 8 ಕ್ಷೇತ್ರದಿಂದ 20 ಅಭ್ಯರ್ಥಿಗಳು ವಾಪಸ್ಸು ಪಡೆದುಕೊಂಡಿದ್ದು, ಅಂತಿಮವಾಗಿ 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ ಒಟ್ಟು 115 ಜನ ನಾಮಪತ್ರ ಸಲ್ಲಿಸಿದ್ದು, ಆ ಪೈಕಿ 20 ಜನ ನಾಮಪತ್ರ ವಾಪಸ್ ಪಡೆದಿದ್ದಾರೆ. ಇನ್ನು ಮುದ್ದೇಬಿಹಾಳ 8, ದೇವರಹಿಪ್ಪರಗಿ 13, ಬಸವನಬಾಗೇವಾಡಿ 13, ಬಬಲೇಶ್ವರ 14, ವಿಜಯಪುರ ನಗರ 14, ನಾಗಠಾಣ 15, ಇಂಡಿ 9, ಸಿಂದಗಿ 9 ಅಭ್ಯರ್ಥಿಗಳು ಸೇರಿದಂತೆ ಅಂತಿಮವಾಗಿ 95 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದರು.

ಇನ್ನು ವಿಜಯಪುರ ನಗರ ಮತಕ್ಷೇತ್ರದ ಐಜಾಜ್ ಅಹ್ಮದ ಜಾಗೀರದಾರ, ಸಿಂದಗಿ ಮತಕ್ಷೇತ್ರದ ಅಮೀರ್‌ಮಜಾ ಚೌಧರಿ, ಅಕ್ಬರ್ ಖಾಜಾಸಾಬ್ ಮುಲ್ಲಾ, ಇಂಡಿ ಮತಕ್ಷೇತ್ರದ ಶಿವಶರಣ ಜೆಟ್ಟೆಪ್ಪ ವಾಲೀಕಾರ್, ಮಹೆಬೂಬ್ ಅಬ್ದುಲ್‌ಗನಿಸಾಬ್ ಅರಬ, ನಾಗಠಾಣ ಮೀಸಲು ಮತಕ್ಷೇತ್ರದ ಅರ್ಜುನ ಬಂಡಿ, ಮಹೇಂದ್ರ ನಾಯಕ, ಶಂಕರ ಪೂಜಾರಿ, ರವೀಂದ್ರ ಕಟ್ಟಿಮನಿ, ಬಬಲೇಶ್ವರ ಮತಕ್ಷೇತ್ರದ ಇಮಾಮ್‌ಜಾಫರ್ ತಿಡಗುಂದಿ, ಮೈಬೂಬ ಮುಲ್ಲಾ, ಯಾಸೀನ್ ಜವಳಿ, ಜಗದೀಶ ಮಲ್ಲಪ್ಪ ಬಿಸಿರೊಟ್ಟಿ, ಕೃಷ್ಣ ಚವ್ಹಾಣ, ಸಂಗಪ್ಪ ಇಂಡಿ, ಸಂಗಯ್ಯ ಮರಿಮಠ, ಮಹಾದೇವ ಪವಾರ, ಬಸವನಬಾಗೇಬಾಡಿ ಮತಕ್ಷೇತ್ರದ ಸಂಯುಕ್ತಾ ಪಾಟೀಲ, ದೇವರಹಿಪ್ಪರಗಿ ಮತಕ್ಷೇತ್ರದ ಬಾಪುಗೌಡ ಮಲ್ಲನಗೌಡ ಪಾಟೀಲ, ಮುದ್ದೇಬಿಹಾಳ ಮತಕ್ಷೇತ್ರದ ಸಿದ್ದಪ್ಪ ವಾಲಿಕಾರ ನಾಮಪತ್ರ ಹಿಂಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!