Wednesday, December 3, 2025

ರಾಜ್ಯ ಮಟ್ಟದ ಯುವ ಜನೋತ್ಸವ | ಯುವ ಜನಾಂಗ ಸದೃಢ ಆರೋಗ್ಯ ಹೊಂದುವಂತೆ ಸಚಿವ ದರ್ಶನಾಪುರ ಕರೆ

ಹೊಸದಿಗಂತ ವರದಿ ಯಾದಗಿರಿ:

ಇಂದಿನ ಪೈಪೋಟಿ ಜಗತ್ತಿನಲ್ಲಿ ಯುವ ಜನಾಂಗ ದುಶ್ಚಟಗಳಿಗೆ ಒಳಗಾಗದೆ ಸದೃಢ ಆರೋಗ್ಯ ಹೊಂದುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳಿಂದ ಮಾನಸಿಕ ಅಸಮತೋಲನ ಹೋಗಲಾಡಿಸಲು ಸಾಧ್ಯವಿದೆ. ನಮ್ಮ ಸರ್ಕಾರ ಕ್ರೀಡೆಗಳಿಗೆ ಮತ್ತು ಕ್ರೀಡಾಪಟುಗಳಿಗೆ ಹೆಚ್ವಿನ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳಿದರು.

ನೂರಾರು ಕ್ರೀಡಾಕೂಟಗಳು ಯುವಜನೋತ್ಸವದಲ್ಲಿ ನಡೆಯುತ್ತಿದ್ದು ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಕ್ರೀಡಾಪಡುಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

error: Content is protected !!