September 26, 2026
Saturday, September 26, 2026
spot_img

ಪಲ್ಯ, ಗ್ರೇವಿ & More 19 | ಬೆಂಡೆಕಾಯಿ ಪೆಪ್ಪರ್ ಫ್ರೈ: ಸಿಂಪಲ್ ಆದ್ರೂ ರುಚಿ ಸೂಪರ್

ಬೆಂಡೆಕಾಯಿ ಎಂದರೆ ಹಲವರಿಗೆ ಇಷ್ಟ, ಕೆಲವರಿಗೆ ಅಷ್ಟೇನು ಇಷ್ಟವಿಲ್ಲ. ಆದರೆ ಪೆಪ್ಪರ್ ಫ್ರೈ ಮಾಡಿ ನೋಡಿದ್ರೆ ಖಂಡಿತಾ ಮತ್ತೆ ಮತ್ತೆ ತಿನ್ನಬೇಕು ಅನ್ನಿಸುತ್ತೆ. ಕಡಿಮೆ ಮಸಾಲೆ, ಹೆಚ್ಚು ರುಚಿ ಪರ್ಫೆಕ್ಟ್ ಸೈಡ್ ಡಿಶ್.

ಬೇಕಾಗುವ ಸಾಮಗ್ರಿಗಳು

ಬೆಂಡೆಕಾಯಿ – 250 ಗ್ರಾಂ
ಈರುಳ್ಳಿ – 1
ಕರಿಮೆಣಸು ಪುಡಿ – 1 ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಅರಿಶಿಣ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 2 ಟೇಬಲ್ ಸ್ಪೂನ್
ಕರಿಬೇವಿನ ಎಲೆ – ಸ್ವಲ್ಪ

ಮಾಡುವ ವಿಧಾನ

ಮೊದಲು ಬೆಂಡೆಕಾಯಿಯನ್ನು ತೊಳೆದು ಸಂಪೂರ್ಣ ಒಣಗಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.

ಈಗ ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ ಜೀರಿಗೆ ಮತ್ತು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಕೊಡಿ. ನಂತರ ಈರುಳ್ಳಿ ಹಾಕಿ ಸ್ವಲ್ಪ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಈಗ ಬೆಂಡೆಕಾಯಿ ಸೇರಿಸಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಮುದ್ದೆಯಾಗದಂತೆ ಮುಚ್ಚದೆ ಬೇಯಿಸುವುದು ಮುಖ್ಯ.

ಅರಿಶಿಣ, ಉಪ್ಪು ಸೇರಿಸಿ 8–10 ನಿಮಿಷ ಬೇಯಿಸಿ. ಕೊನೆಯಲ್ಲಿ ಕರಿಮೆಣಸು ಪುಡಿ ಹಾಕಿ ಕಲಸಿ 2 ನಿಮಿಷ ಹುರಿದರೆ ಸಾಕು ಬಿಸಿ ಬಿಸಿ ಬೆಂಡೆಕಾಯಿ ಪೆಪ್ಪರ್ ಫ್ರೈ ಅನ್ನ, ರೊಟ್ಟಿ ಅಥವಾ ಚಪಾತಿ ಜೊತೆ ಸವಿಯಲು ಸಿದ್ಧ!

Must Read