ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ: ಪ್ರದೀಪ್ ಕುಮಾರ್ ಗೆ ಸ್ಟ್ರಾಂಗ್ ಮೆನ್ ಆಫ್ ಕರ್ನಾಟಕ ಅವಾರ್ಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೊಸಪೇಟೆಯಲ್ಲಿ ನವೆಂಬರ್ 19 ಮತ್ತು 20ರಂದು ನಡೆದ ರಾಜ್ಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ-2022ರಲ್ಲಿ ಮಂಗಳೂರಿನ ಬಾಲಂಜನೇಯ ಜಿಮ್ನೇಶಿಯಂನ್ನು ಪ್ರತಿನಿಧಿಸಿದ ಪ್ರದೀಪ್ ಕುಮಾರ್ ಅವರು, ಚಿನ್ನದ ಪದಕದೊಂದಿಗೆ ಸ್ಟ್ರಾಂಗ್ ಮೆನ್ ಆಫ್ ಕರ್ನಾಟಕ -2022 ಅವಾರ್ಡ್ ಅನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಒಟ್ಟು 817. 5 ಕೆ.ಜಿ ಭಾರವೆತ್ತಿದ ಅವರು, ಸ್ಕ್ವಾಟ್ ಮತ್ತು ಬೆಂಚ್ ಪ್ರೆಸ್ ಹಾಗೂ ಒಟ್ಟು ವಿಭಾಗದಲ್ಲಿ ರಾಜ್ಯ ಮಟ್ಟದ ದಾಖಲೆಯನ್ನು ಬರೆದಿದ್ದಾರೆ. ಪ್ರದೀಪ್ ಅವರು ಪ್ರಸ್ತುತ ಮಂಗಳೂರಿನ ಕಶಾರ್ಪ್ ಫಿಟ್‌ನೆಸ್‌ನಲ್ಲಿ ಜೆನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!