ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಪಕ್ಷ, ಜುಲೈ 3 ರಂದು ಬಜೆಟ್ ಅಧಿವೇಶನ ಕರೆದಿದ್ದು, ಜುಲೈ 7 ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದಂತೆ, ಮಧ್ಯಾಹ್ನ 12 ಗಂಟೆಗೆ ಜಂಟಿ ಅಧಿವೇಶನವನ್ನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾತನಾಡಲಿದ್ದಾರೆ
ಜುಲೈ 3 ರಂದು ಆರಂಭವಾಗಲಿರುವ ಅಧಿವೇಶನದ ಮೂರು ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರ ಭಾಷಣದ ಮೇಲೆ ಚರ್ಚೆಗಳು ನಡೆಯಲಿದೆ.
ಬಳಿಕ ಸಿಎಂ ಸಿದ್ಧರಾಮಯ್ಯಈವರೆಗೂ 13 ಬಜೆಟ್‌ಗಳನ್ನು ಯಶಸ್ವಿಯಾಗಿ ಮಂಡಿಸಿದ್ದು, ದಾಖಲೆಯ 14ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಮೇ 20 ರಂದು ಮುಖ್ಯಮಂತ್ರಿ ಗಾದಿ ಏರಿದ್ದ ಸಿದ್ಧರಾಮಯ್ಯ, ಒಂದೂವರೆ ತಿಂಗಳಿನಿಲ್ಲಿಯೇ ಬಜೆಟ್ ಅಧಿವೇಶನಕ್ಕೆ ಸಿದ್ಧರಾಗಿದ್ದಾರೆ.