ಪೋಷಕರ ಲೈಂಗಿಕತೆ ಬಗ್ಗೆ ಹೇಳಿಕೆ! ರಣ್‌ವೀರ್‌ ಜೊತೆ ಬ್ರೇಕ್‌ಅಪ್‌ ಮಾಡಿಕೊಂಡ್ಲಾ ಗರ್ಲ್‌ಫ್ರೆಂಡ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪೋಷಕರ ಲೈಂಗಿಕ ಕ್ರಿಯೆಯನ್ನು ದಿನವೂ ನೋಡ್ತೀರಾ ಅಥವಾ ಅವರ ಜೊತೆ ನೀವೂ ಸೇರಿಕೊಂಡು ಅದನ್ನು ನಿಲ್ಲಿಸುತ್ತೀರೋ ಎನ್ನುವ ವಿವಾದಾತ್ಮಕ ಪ್ರಶ್ನೆಯನ್ನು ಹಾಕಿ ತಮ್ಮ ಕರಿಯರ್‌ಗೆ ಯುಟ್ಯೂಬರ್‌ ರಣ್‌ವೀರ್‌ ಅಲಹಾಬಾದಿಯಾ ಪೆಟ್ಟು ಬೀಳಿಸಿಕೊಂಡಿದ್ದಾರೆ.

ಇದಷ್ಟೇ ಅಲ್ಲದೇ ತಮ್ಮ ಖಾಸಗಿ ಜೀವನಕ್ಕೂ ಪೆಟ್ಟು ಬಿದ್ದಿದ್ದು, ಗರ್ಲ್‌ ಫ್ರೆಂಡ್‌ ನಿಕ್ಕಿ ಶರ್ಮಾ ಕೂಡ ಬ್ರೇಕ್‌ಅಪ್‌ ಮಾಡಿಕೊಂಡಿದ್ದರು ಎನ್ನಲಾಗಿತ್ತು.

ರಣವೀರ್ ಹಾಗೂ ನಿಕ್ಕಿ ಶರ್ಮಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಶೀಘ್ರವೇ ಮದುವೆ ಆಗುವ ಆಲೋಚನೆಯಲ್ಲಿ ಇದ್ದಾರೆ. ಈಗ ರಣವೀರ್ ಹಾಗೂ ನಿಕ್ಕಿ ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

ಆದರೆ, ಇದು ಸುಳ್ಳು ಎಂಬುದು ತಿಳಿದು ಬಂದಿದೆ. ಇನ್​ಸ್ಟಾಗ್ರಾಮ್​ನಲ್ಲಿ ಇಬ್ಬರೂ ಪರಸ್ಪರ ಒಬ್ಬರನ್ನೊಬ್ಬರು ಫಾಲೋ ಮಾಡಿಕೊಳ್ಳುತ್ತಾ ಇದ್ದಾರೆ. ಹೀಗಾಗಿ, ಈ ಒಂದು ಹೇಳಿಕೆಯಿಂದ ಹಲವು ವರ್ಷಗಳ ಪ್ರೀತಿ ಕೊನೆ ಆಗಿದೆ ಎಂಬ ಹೇಳಿಕೆ ಸುಳ್ಳು ಎಂದು ವರದಿ ಆಗಿದೆ.

‘ಬೀರ್ ಬೈಸೆಪ್ಸ್’ ಎಂಬ ಯೂಟ್ಯೂಬ್ ಖಾತೆ ಮೂಲಕ ಸುಮಾರು ಏಳು ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ. ಅವರು ತಿಂಗಳಿಗೆ ಸುಮಾರು 35 ಲಕ್ಷ ರೂ.ಗಳನ್ನು ಗಳಿಸುತ್ತಾರೆ. ಇದಲ್ಲದೆ, ರಣವೀರ್ ಇತರ ವ್ಯವಹಾರಗಳನ್ನು ಸಹ ಹೊಂದಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ರಣವೀರ್ ಅವರ ಮಾಸಿಕ ಆದಾಯ 50 ಲಕ್ಷ ರೂ.ಗಳವರೆಗೆ ಇದೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!