ದಿಗಂತ ವರದಿ ಹಾವೇರಿ:
ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ ತಮ್ಮ ಮಾತಿನಂತೆ ನಡೆದುಕೊಳ್ಳುತ್ತಿಲ್ಲ, ಇದನ್ನು ಅವರಿಗೆ ಜ್ಞಾಪಕ ಮಾಡು ನಿಟ್ಟಿನಲ್ಲಿ ಮತ್ತು ವಿದ್ಯುತ್ ಇಲಾಖೆಯ ರೈತ ವಿರೋಧಿ ಕಾರ್ಯಕ್ರಮ ಖಂಡಿಸಿ ರಾಜ್ಯಾದ್ಯಂತ ಸೆ.೪ರಂದು ಆಯಾ ಜಿಲ್ಲಾ ವಿದ್ಯುತ್ ಇಲಾಖೆಯ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಎನ್‌ಡಿಎ ನೇತ್ರತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಗೊಳಿಸಿದಾಗ ರಾಜ್ಯದ ಸಿಎಂ ಆಗಿದ್ದ ಯಡಿಯೂರಪ್ಪ ಅದನ್ನು ಅನುಷ್ಠಾನಕ್ಕೆ ತಂದರು. ಆಗ ಇದೇ ಸಿದ್ದರಾಮಯ್ಯ ಅದನ್ನು ನಮ್ಮ ಸರ್ಕಾರ ಬದ 24ಗಂಟೆಯಲ್ಲಿ ರದ್ದುಗೊಳಿಸುವ ಭರವಸೆ ನೀಡಿದ್ದರು. ಆದರೆ ಅದು ಇಂದಿಗೂ ಈಡೇರಿಲ್ಲ. ಪ್ರಸ್ತುತ ೧೦ ಲಕ್ಷ ರೈತರು ಕೃಷಿ ಯಿಂದ ವಂಚಿತರಾಗಿದ್ದಾರೆ. 1974 ರಲ್ಲಿ ದೇವರಾಜ ಅರಸು ಜಾರಿಗೆ ತಂದ ಕಾಯ್ದೆ ಯ ಬಲವನ್ನೇ ಕುಗ್ಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮಾತಿನಲ್ಲಿ ಎಲ್ಲರನ್ನೂ ವಂಚಿಸುತ್ತಿದ್ದಾರೆ. ಕನಿಷ್ಟ ಬೆಂಬಲ ಬೆಲೆ ನಿಗದಿ ಇಂದಿಗೂ ಕಾನೂನಾತ್ಮಕ ಕಾಯ್ದೆ ಆಗಿಲ್ಲ. ಕೇಂದ್ರದ ಮತ್ತು ರಾಜ್ಯದ ಸರ್ಕಾರಕ್ಕೆ ಈ ಕುರಿತು ಇಚ್ಛಾಶಕ್ತಿ ಇಲ್ಲವಾಗಿದೆ. ಈ ಹಿಂದೆ ಜಿಂದಾಲ್ ಗೆ ಭೂಮಿ ನೀಡಿದ್ದ ಯಡಿಯೂರಪ್ಪ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಇದೇ ಸಿದ್ದರಾಮಯ್ಯ ಬೊಬ್ಬೆ ಹೊಡೆದರು. ಈಗ ಅದೇ ಸಿದ್ದರಾಮಯ್ಯ ನ ಕಿಕ್ ಬ್ಯಾಕ್ ಎಷ್ಟು ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ಸವಾಲು ಹಾಕಿದ ಅವರು, ಜನರ ಪ್ರತಿ ಪೈಸೆ, ರಕ್ತದ ಶ್ರಮದ ಈ ಹಣವನ್ನು ನಿಮ್ಮ ಹಾಗೆ ಬಂದವರೆಲ್ಲ ಲೂಟಿ ಹೊಡೆದರೆ ಹೇಗೆ ಎಂದು ಪ್ರಶ್ನಿಸಿದರು.
ಕೇಂದ್ರ 9.90ಲಕ್ಷ ಕೋಟಿ ಹಣವನ್ನು ಉದ್ದಿಮೆದಾರರ, ಬಂಡವಾಳಗಾರರ ತೆರಿಗೆ ಹಣ ಕೈಬಿಟ್ಟಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿಯ 32000 ಕೋಟಿ ತೆರಿಗೆ ಬಾಕೊ ಇದೆ. ಅದೆ ರೀತಿ ಎಲ್ಲ ರೈತರ ಸಾಲಾ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.
ಕೆಇಬಿ ಖಾಸಗೀಕರಣಕ್ಕೆ ಅಂದಿನ ಸಿಎಂ ಎಸ್.ಎಂ. ಕೇಷ್ಣ ಮುಂದಾಗಿದ್ದರು. ಆದರೆ ಎಲ್ಲರ ಹೋರಾಟದ ಫಲ ಇಂದು ಐದು ಭಾಗವಾಗಿ ಸರ್ಕಾರದ ಕಂಪನಿಯೇ ಆ್ಇ ಮುಂದುವರೆದಿದೆ. ಆದರೆ ಈಗ ರೈತರ ಪಂಪ್ ಸೆಟ್‌ಗಳನ್ನು ಆಧಾರ ಕಾರ್ಡಿಗೆ ಜಾಒಡಣೆ ಮಾಡುವ ಹುನ್ನಾರ ಆರಂಭವಾಗಿದ್ದು ಇದಕ್ಕೆ ನಮ್ಮ ಅಸಮಾಧಾನ ಇದೆ. ಇದರಿಂದ ರೈತನಿಗೆ ಅಥವಾ ಸರ್ಕಾರಕ್ಕೆ ಏನು ಪ್ರಯೋಜನ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಈಗಾಗಲೇ ರಾಜ್ಯದಲ್ಲಿ 30ಲಕ್ಷ ಪಂಪ್ ಸೆಟ್ ಸಂಪರ್ಕ ಇವೆ. ಸೋಲಾರ ಅಳವಡಿಕೆಗೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಶಾಶ್ವತವಾಗಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ವಿದ್ಯುತ್ ವೋಲ್ಟೇಜ್ ಗುಣಮಟ್ಟ ಕೂಡ ಸರಿಇಲ್ಲ. ಅದನ್ನು ಸರಿಪಡಿಸಲಿ ಎಂದು ಒತ್ತಾಯಿಸಿದರು.