ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಪಿ ಮಲತಾಯಿಯೊಬ್ಬಳ ಸಿಟ್ಟಿಗೆ ಮೂರು ವರ್ಷದ ಮಗು ಬಲಿಯಾಗಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಮಗುವನ್ನು ಕಾಫಿತೋಟಕ್ಕೆ ಕರೆದೊಯ್ದು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಅಲ್ಲೂರಿ ಸೀತಾಮರಾಜು ಜಿಲ್ಲೆಯ ಮುಂಚಿಂಗಿಪುಟ್ಟು ಮಂಡಲದ ಬಂಗಾರುಮೆಟ್ಟ ಪಂಚಾಯಿತಿ ಸರಿಯಪಲ್ಲಿಯಲ್ಲಿ ಭಾನುವಾರ ನಡೆದ ಈ ಗಟನೆ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ. ಮೂರು ವರ್ಷದ ಹರ್ಷಿಣಿ ಎಂಬ ಮಗುವನ್ನು ಮಲತಾಯಿ ವಂಟಲ ನೀಲಮ್ಮ ಕಾಫಿ ತೋಟಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಬಳಿಕ ಗ್ರಾಮಕ್ಕೆ ಬಂದು ಶರಣಾಗಿದ್ದಾರೆ. ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ.
ಸರಿಯಪಲ್ಲಿಯ ಭಾಸ್ಕರ ರಾವ್ ಅವರು ಮೊದಲ ಪತ್ನಿ ತೀರಿಕೊಂಡಿದ್ದು, ನೀಲಮ್ಮ ಅವರನ್ನು ಎರಡನೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಮೊದಲಿನಿಂದಲೂ ಮೊದಲ ಹೆಂಡತಿ ಮಕ್ಕಳಿಗೆ ಮಲತಾಯಿಯ ಕಿರುಕುಳ ಮುಂದುವರಿದಿತ್ತು. ಆಕೆಯ ಮೇಲೆ ಅನುಮಾನಗೊಂಡ ಭಾಸ್ಕರ ರಾವ್ ಇತ್ತೀಚೆಗಷ್ಟೇ ಮಗನನ್ನು ಪಕ್ಕದ ಗ್ರಾಮದಲ್ಲಿ ಬಚ್ಚಿಟ್ಟಿದ್ದ. ಪುಟ್ಟ ಬಾಲಕಿ ಹರ್ಷಿಣಿ ಇಲ್ಲೇ ಇದ್ದಳು. ಮಕ್ಕಳ ಮೇಲೆ ಪ್ರೀತಿ ತೋರದ ಪಾಪಿ ಮಲತಾಯಿ ತಂದೆ ಇಲ್ಲದ ವೇಳೆ ಬೆಟ್ಟದ ಕಾಫಿ ತೋಟಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲ್ಲಲಾಯಿತು.
ಮಗುವನ್ನು ಕೊಂದ ಮಲತಾಯಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ಹೊರಹಾಕಿದ್ದು, ಆಕೆಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.