ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಗ್ರ ಪಟ್ಟಿಯಲ್ಲಿ ಇರುವ ಮೂವರು ಮೋಸ್ಟ್ ವಾಂಟೆಂಡ್ ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಇವರ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಎನ್‌ಐಎ ಈ ಮೂವರು ಉಗ್ರರನ್ನು ಹುಡುಕಿಕೊಟ್ಟರೆ ಮೂರು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಮೂವರು ಭಯೋತ್ಪಾಕರು ಓದು ಬಾರದವರಲ್ಲ, ಉನ್ನತ ಶಿಕ್ಷಣ ಪಡೆದಿದ್ದ ಮೂಲಭೂತವಾದಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಂಧಿತರಾದ ಶಹನವಾಜ್ ಅಲ್ಮಾ, ಅಲಿಯಾಸ್ ಶಫಿ ಉಜ್ಜಾಮ ವೃತ್ತಿಯಲ್ಲಿ ಇಂಜಿನಿಯರ್, ಮೈನಿಂಗ್ ಇಂಜಿನಿಯರಿಂಗ್ ಮಾಡಿದ್ದು, ಸ್ಫೋಟದ ಬಗ್ಗೆ ಜ್ಞಾನವಿದೆ. ಎರಡನೇ ಬಂಧಿತ ಅರ್ಷದ್ ವಾರ್ಸಿ ಜಾರ್ಖಂಡ್ ನಿವಾಸಿ ಈತ ಮೆಕ್ಯಾನಿಕಲ್ ಇಂಜಿನಿಯರ್, ಸದ್ಯ ಪಿಎಚ್‌ಡಿ ಕೂಡ ಪಡೆಯುತ್ತಿದ್ದಾರೆ. ಈತ ಐಸಿಸ್ ಹ್ಯಾಂಡ್ಲರ್‌ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಮೂರನೇ ಬಂಧಿತ ರಿಜ್ವಾನ್ ಅಶ್ರಫ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. ಈತ ಮೌಲ್ವಿಯಾಗೂ ತರಬೇತಿ ಪಡೆದಿದ್ದಾರೆ.
ಗಣ್ಯರನ್ನು ಗುರಿಯಾಗಿಸಿ, ಹೆಚ್ಚು ಮಂದಿಗೆ ಹಾನಿ ಮಾಡುವುದು ಇವರ ದೊಡ್ಡ ಉದ್ದೇಶವಾಗಿದೆ ಎಂದು ಪೊಲೀಸರು ಹೇಳಿದ್ದಾರೆ,