ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಳುವಾಗಿದ್ದ ಕಾರು ವಾರಣಾಸಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಗೋವಿಂದಪುರಿ ಪ್ರದೇಶದ ಸರ್ವೀಸ್ ಸೆಂಟರ್‌ನಿಂದ ಕಾರನ್ನು ಕಳವು ಮಾಡಲಾಗಿದ್ದು. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 19 ರಂದು, ಕಾರು ಚಾಲಕ ಜೋಗಿಂದರ್ ಸಿಂಗ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದರು. ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಬಂಧಿತರು. ಆರೋಪಿಗಳು ಫರಿದಾಬಾದ್ ಬಳಿಯ ಬಧಕಲ್ ನಿವಾಸಿಗಳು ಎಂದು ತಿಳಿದು ಬಂದಿದೆ .
ಈ ಇಬ್ಬರು ಕ್ರೆಟಾ ಕಾರಿನಲ್ಲಿ ಗೋವಿಂದಪುರಿಗೆ ಬಂದಿದ್ದರು, ಬಳಿಕ ಬಧಕಲ್ಗೆ ಕೊಂಡೊಯ್ದು ನಂತರ ಕದ್ದ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದರು ಎನ್ನಲಾಗಿದೆ.
ಆರೋಪಿಗಳು ಫಾರ್ಚೂನರ್ ಅನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿ ಬಣ್ಣದ ಫಾರ್ಚುನರ್ ಎಸ್‌ಯುವಿಯನ್ನು ಮಾರ್ಚ್ 19 ರಂದು ಸೇವಾ ಕೇಂದ್ರಕ್ಕೆ ತಲುಪಿಸುವಾಗ ಕಳ್ಳತನವಾಗಿತ್ತು.