ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮಂಗಳವಾರ ಮುಂಜಾನೆ ಕಲಬುರಗಿಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಸರ್ಕಾರಿ ಬಸ್ ಅನ್ನು ಕಳ್ಳರು ಕದ್ದೊಯ್ದಿದ್ದು, ಇದೀಗ ವಾಹನವು ತೆಲಂಗಾಣದ ಭೂಕೈಲಾಶ್ ಯಾತ್ರಾ ಕೇಂದ್ರದಲ್ಲಿ ಪತ್ತೆಯಾಗಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ(ಕೆಕೆಆರ್‌ಟಿಸಿ) ಸೇರಿದ ಬೀದರ್ ಬಸ್ ಡಿಪೋ- 2ರ ಬಸ್ ಸುಮಾರು 13 ಗಂಟೆಗಳ ಶೋಧ ಕಾರ್ಯ ನಡೆಸಿದ ನಂತರ ಪೊಲೀಸರಿಗೆ ಸಿಕ್ಕಿದೆ.
ಕಳ್ಳತನವಾಗಿರುವ ವಿಷಯ ತಿಳಿದ ಕೂಡಲೇ ಪೊಲೀಸರು ಎರಡು ತಂಡಗಳನ್ನು ರಚಿಸಿ ಚಿಂಚೋಳ್ಳಿ-ತಾಂಡೂರು ನಡುವಿನ ವಿವಿಧೆಡೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ರಸ್ತೆ ಬದಿಯ ಕಂದಕಕ್ಕೆ ಬಸ್ ಚಕ್ರಗಳು ಸಿಲುಕಿದ ನಂತರ ಕಳ್ಳರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.