ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಭಾರತದಲ್ಲಿ ಮಳೆ ಅನಾಹುತ ಸೃಷ್ಟಿಸುತ್ತಿದೆ. ಇನ್ನೂ ಹಲವೆಡೆ ಮಳೆಯ ಆರ್ಭಟ ನಿಂತಿಲ್ಲ. ದೆಹಲಿಯ ಎನ್‌ಸಿಆರ್, ಗುರ್‌ಗಾಂವ್, ಮುಂಬೈ, ಉತ್ತರಾಖಂಡ, ಹಿಮಾಚಲಪ್ರದೇಶ ಮತ್ತು ಯುಪಿಯಂತಹ ಹಲವೆಡೆ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ನದಿ, ಜಲಪಾತಗಳು ತುಂಬಿ ಹರಿಯುತ್ತಿದ್ದು, ಎಚ್ಚರಿಕೆಯಿಂದಿರುವಂತೆ ಆಯಾ ಸರ್ಕಾರಗಳು ಸೂಚಿಸುತ್ತಿವೆ. ಮಳೆ, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳ ಬಳಿ ಎಚ್ಚರದಿಂದಿರುವ ಎಷ್ಟು ಮುಖ್ಯ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.
ಉತ್ತರಾಖಂಡದ ಚಮೋಲಿ ಪೊಲೀಸರು ಇಂತಹ ವಿಡಿಯೋವನ್ನು ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಕೆಲವರು ಜಲಪಾತದ ಕೆಳಗೆ ಸಂತೋಷದಿಂದ ಜಳಕ ಮಾಡುವುದನ್ನು ನೋಡಬಹುದು.
ಒಂದೆಡೆ ಮೇಲಿನಿಂದ ನೀರು ಹರಿಯುತ್ತಿದೆ. ಇನ್ನು ಕೆಲವರು ಜಲಪಾತದ ಕೆಳಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ಈ ವೇಳೆ ನೀರಿನ ಜತೆಗೆ ಜನರ ಮೇಲೆ ದೊಡ್ಡ ಕಲ್ಲು ಬೀಳುವ ದೃಶ್ಯ ಕಾಣಬಹುದು. ಇದನ್ನು ನೋಡಿದ ಸ್ಥಳದಲ್ಲಿದ್ದ ಜನ ಕಿರುಚಾಡತೊಡಗಿದರು. ಈ ಘಟನೆಯಲ್ಲಿ ಯಾರಿಗೆ ಏನಾಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. 1.29 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಡಿಯೋ ಹಳೆಯದಾದರೂ ಇಂತಹ ಸ್ಥಳಗಳಿಗೆ ಹೋಗುವಾಗ ಎಚ್ಚರವಿರಲಿ.
बरसात के मौसम के दौरान पहाड़ो में झरनों के नीचे नहाने से बचें। pic.twitter.com/bY9Xs08zxw
— Chamoli Police Uttarakhand (@chamolipolice) August 20, 2023